ಇಲ್ಲಿ ಕೋವಿಡ್ ಸಂತ್ರಸ್ತರಿಗೆ ನೆರವು ನೀಡುವುದರಲ್ಲಿ ತೊಡಗಿಸಿಕೊಂಡಿರೋ ಹರ್ಷಿಕಾ ಪೂಣಚ್ಚ, ಅಲ್ಲಿ ಬಿಹಾರದಲ್ಲಿ ಗ್ಲಾಮರಸ್ ಗೊಂಬೆಯಾಗಿ ಪ್ರತ್ಯಕ್ಷರಾಗಿದ್ದಾರೆ. ಹರ್ಷಿಕಾ ಇತ್ತೀಚೆಗೆ ಭೋಜ್‍ಪುರಿ ಸಿನಿಮಾದಲ್ಲಿ ನಟಿಸಿರೋ ವಿಷಯ ಗೊತ್ತಿದೆ ತಾನೇ.. ಆ ಚಿತ್ರದ ಟ್ರೇಲರ್ ಹೊರಬಿದ್ದಿದೆ.
ಭೋಜ್‍ಪುರಿಯ ಹಮ್ ಹೈನ ರಹಿ ಪ್ಯಾರ್ ಕೇ ಅನ್ನೋ ಚಿತ್ರದಲ್ಲಿ ಗ್ಲಾಮರಸ್ ಗೊಂಬೆಯಾಗಿ ಮಿಂಚಿದ್ದಾರೆ ಹರ್ಷಿಕಾ. ಟ್ರೇಲರ್ ನೋಡಿದರೆ ಅದೊಂದು ರೊಮ್ಯಾಂಟಿಕ್ ಕಾಮಿಡಿ ಲವ್ ಸ್ಟೋರಿ ಎನ್ನಿಸುತ್ತಿದೆ. ಪ್ರೇಮನ್ಯು ಸಿಂಗ್ ಎಂಬುವವರು ನಿರ್ದೇಶಿಸಿರುವ ಆ ಸಿನಿಮಾ, ವಿದೇಶಗಳಲ್ಲಿಯೇ ಬಹುಪಾಲು ಚಿತ್ರೀಕರಣವಾಗಿದೆ.