ಬಿಗ್ ಬಾಸ್‍ನಲ್ಲಿ ಎಲ್ಲರ ಗಮನ ಸೆಳೆದ ಪ್ರಶಾಂತ್ ಸಂಬರಗಿ ಈಗ ಸಿನಿಮಾ ಹಾಗೂ ಜಾಹೀರಾತು ಮಂದಿಗೆ ಹಾಟ್ ಕೇಕ್. ವಕೀಲ ಹಾಗೂ ಚಿಂತಕರಾಗಿ ಫೇಮಸ್ ಆಗಿದ್ದ ಪ್ರಶಾಂತ್ ಸಂಬರಗಿಗೆ ಈಗ ಸಿನಿಮಾದವರಿಂದಲೂ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹಾಗಂತ ಸಂಬರಗಿ ಚಿತ್ರರಂಗಕ್ಕೆ ಹೊಸಬರೇನಲ್ಲ. ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಚಿತ್ರೋದ್ಯಮಿಯೂ ಹೌದು. ಆದರೆ ಈಗ ಡಿಮ್ಯಾಂಡ್ ಬಂದಿರೋದು ನಟನಾಗಿ ನಟಿಸೋದಕ್ಕೆ.
ಹಂಸಲೇಖ ಅವರ ಹೊಸ ಸಿನಿಮಾ, ರವಿ ಶ್ರೀವತ್ಸ ಸಿನಿಮಾ ಹಾಗೂ ಎನ್.ಕುಮಾರ್ ನಿರ್ಮಾಣದ ಸಿನಿಮಾಗಳಲ್ಲಿ ಆಫರ್ ಬಂದಿದ್ದು, ಸಂಬರಗಿ ಓಕೆ ಎಂದಿದ್ದಾರಂತೆ. ಇನ್ನೂ ಹಲವು ಆಫರ್‍ಗಳನ್ನು ತಿರಸ್ಕರಿಸಿದ್ದೂ ಇದೆ. ಅಡುಗೆ ಪದಾರ್ಥ ಮತ್ತು ಪೈಂಟಿಂಗ್ ಜಾಹೀರಾತಿಗೂ ಓಕೆ ಎಂದಿದ್ದಾರಂತೆ. ಅಡ್ವಾನ್ಸ್ ಬಂದಿದೆ. ಆಕ್ಟಿಂಗ್ ಇನ್ನು ಶುರುವಾಗಬೇಕಿದೆ.