ನಿಧಿ ಸುಬ್ಬಯ್ಯ ಇತ್ತೀಚೆಗಷ್ಟೇ ಬಿಗ್ ಬಾಸ್ ಮುಗಿಸಿ ಹೊರಬಂದಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದ ವೇಳೆ ನಿಧಿ ಸುಬ್ಬಯ್ಯ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ಮದುವೆ, ವೈವಾಹಿಕ ಜೀವನ ನನ್ನ ಜೀವನದ ಮುಗಿದ ಅಧ್ಯಾಯ. ನಾನೀಗ ಏಏ ಹೇಳಿದರೂ ಅದು ಒನ್ ಸೈಡ್ ಆಗುತ್ತೆ. ಅದು 10 ತಿಂಗಳ ಜೀವನ. ಈಗ ಆ ವ್ಯಕ್ತಿ ಇಲ್ಲದೇ ಇರುವಾಗ ಅದರ ಬಗ್ಗೆ ಹೇಳೋದು ತಪ್ಪಾಗುತ್ತೆ. ಆ ಕಷ್ಟವನ್ನು ನಾನು ನನ್ನ ತಾಯಿಯ ಬಳಿಯೂ ಹೇಳಿಕೊಂಡಿಲ್ಲ. ಆಯ್ತು.. ಹೋಯ್ತು.. ಬಿಟ್ಟು ಮುಂದಕ್ಕೆ ಹೋಗಬೇಕು.. ಅಷ್ಟೆ ಎಂದಿದ್ದಾರೆ ನಿಧಿ ಸುಬ್ಬಯ್ಯ.
2017ರಲ್ಲಿ ನಿಧಿ ಸುಬ್ಬಯ್ಯ ಲಾವೇಶ್ ಕರಂಜಿಯಾ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದರು. 10 ತಿಂಗಳ ನಂತರ ಬೇರೆಯಾಗಿದ್ದರು. ಏನಾಯ್ತು ಎಂಬ ಬಗ್ಗೆ ಅಂದಿನಿಂದ ಇಂದಿನವರೆಗೂ ಹೇಳಿಕೊಂಡಿಲ್ಲ. ದೂರವಾದ ಪತಿಯ ಬಗ್ಗೆಯೂ ಪಾಸಿಟಿವ್ ಆಗಲೀ, ನೆಗೆಟಿವ್ ಆಗಲೀ.. ಮಾತನಾಡಿಲ್ಲ.