` ಹರ್ಷಿಕಾ ಪೂಣಚ್ಚ, ಭುವನ್ ಗೌಡರಿಂದ ಫೀಡ್ & ಶ್ವಾಸ ಕರ್ನಾಟಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹರ್ಷಿಕಾ ಪೂಣಚ್ಚ, ಭುವನ್ ಗೌಡರಿಂದ ಫೀಡ್ & ಶ್ವಾಸ ಕರ್ನಾಟಕ
ಹರ್ಷಿಕಾ ಪೂಣಚ್ಚ, ಭುವನ್ ಗೌಡರಿಂದ ಫೀಡ್ & ಶ್ವಾಸ ಕರ್ನಾಟಕ

ಫೀಡ್ ಕರ್ನಾಟಕ : ಈ ಯೋಜನೆ ಮೂಲಕ ಅಗತ್ಯ ಇರುವವರಿಗೆ ಆಹಾರ, ಔಷಧಿ ವಿತರಿಸುವುದು

ಶ್ವಾಸ : ಈ ಯೋಜನೆಯಲ್ಲಿ ಎರಡು ಆಕ್ಸಿಜನ್ ಬಸ್ ಸಿದ್ಧ ಮಾಡಲಾಗಿದ್ದು, ಅಗತ್ಯ ಇರುವ ರೋಗಿಗಳಿಗೆ ಇದರ ಸೌಲಭ್ಯ ಒದಗಿಸುವುದು

ಈ ಎರಡೂ ಯೋಜನೆಗಳನ್ನು ಆರಂಭಿಸಿರುವುದು ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಗೌಡ ಜೋಡಿ. ಭುವನಂ ಎಂಬ ಫೌಂಡೇಷನ್ ಮೂಲಕ ಈ ಯೋಜನೆ ಆರಂಭಿಸಿದ್ದಾರೆ. ಆಕ್ಸಿಜನ್ ಬಸ್‍ಗಳು ಸರ್ಕಾರಿ ಆಸ್ಪತ್ರೆ ಎದುರು ನಿಲ್ಲಲಿವೆ. ಸರ್ಕಾರಿ ಆಸ್ಪತ್ರೆ ವೈದ್ಯರೇ ಇದರ ಉಸ್ತುವಾರಿ ಮಾಡಲಿದ್ದಾರೆ. ಬೆಡ್ ಸಿಗುವವರೆಗೆ ತುರ್ತು ಅಗತ್ಯ ಇರುವ ರೋಗಿಗಳಿಗೆ ಇದರ ಸೌಲಭ್ಯ ನೀಡಲಿದ್ದೇವೆ ಎಂದಿದ್ದಾರೆ ಹರ್ಷಿಕಾ ಪೂಣಚ್ಚ. ಮುಂದಿನ ದಿನಗಳಲ್ಲಿ ಬಸ್‍ಗಳ ಸಂಖ್ಯೆಯನ್ನು 50ಕ್ಕೆ ಏರಿಸುವ ಉದ್ದೇಶವಿದೆ ಎಂದಿದ್ದಾರೆ ಭುವನ್ ಗೌಡ. ಈ ಉಚಿತ ಸೌಲಭ್ಯಗಳ ಯೋಜನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಚಾಲನೆ ನೀಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery