` ಮಕ್ಕಳ ಹೆಣ ಸಾಗಿಸುವ ಕೆಲಸ ಬಾರದಿರಲಿ : ಅರ್ಜುನ್ ಗೌಡ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮಕ್ಕಳ ಹೆಣ ಸಾಗಿಸುವ ಕೆಲಸ ಬಾರದಿರಲಿ : ಅರ್ಜುನ್ ಗೌಡ
Arjun Gowda

ನಟ ಅರ್ಜುನ್ ಗೌಡ, ಕೋವಿಡ್ 2ನೇ ಅಲೆ ತೀವ್ರವಾದಾಗ ಯಾರೊಬ್ಬರೂ ಮಾಡದೇ ಇರುವ ಕಾಯಕಕ್ಕೆ ಕೈ ಹಾಕಿದರು. ಆಂಬುಲೆನ್ಸ್ ಡ್ರೈವರ್ ಆದರು. ಅದೆಷ್ಟು ಶವಗಳನ್ನು ಸಾಗಿಸಿದರೋ.. ಕೈಯಾರೆ ಸಂಸ್ಕಾರ ಮಾಡಿದರೋ.. ಅದೆಷ್ಟು ಕಂಬನಿ ಒರೆಸಿದರೋ.. ಲೆಕ್ಕವಿಟ್ಟಿಲ್ಲ. ಒಟ್ಟಿನಲ್ಲಿ ನೋವಿನಿಂದ ನರಳುತ್ತಿದ್ದ ಕುಟುಂಬಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರೋ ಅರ್ಜುನ್ ಗೌಡ ಅವರಿಗೆ ಈಗ ಹೊಸ ಆತಂಕ ಶುರುವಾಗಿದೆ.

ಈಗ ಪ್ರತಿದಿನ 20-25 ಫೋನ್ ಬರುತ್ತಿವೆ. ತಂದೆ ತಾಯಿ ಇಬ್ಬರೂ  ಸತ್ತಿದ್ದಾರೆ. ಮಕ್ಕಳು ಅನಾಥವಾಗಿವೆ. ಏನು ಮಾಡೋದು ಎನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಹಲವು ಹಿರಿಯರ ಶವ ಸಾಗಿಸಿದ್ದೇನೆ. ಈಗ ಅದೇ ಆಂಬುಲೆನ್ಸ್‍ನಲ್ಲಿ ಮಕ್ಕಳ ಹೆಣವನ್ನು ಸಾಗಿಸಬೇಕಾ..? ಇದಕ್ಕೆಲ್ಲ ಯಾರು ಹೊಣೆ ಎಂದಿರುವ ಅರ್ಜುನ್ ಗೌಡ, ಅಪ್ಪ ಅಮ್ಮನನ್ನು ಕಳೆದುಕೊಂಡಿರುವ ಮಕ್ಕಳ ಬಗ್ಗೆ ಗಮನ ಹರಿಸುವ ತುರ್ತು ಅಗತ್ಯವಿದೆ ಎಂದಿದ್ದಾರೆ.

 

ದೆಹಲಿಯಲ್ಲಿ ಮತ್ತು ಮಧ್ಯ ಪ್ರದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಅನಾಥ ಮಕ್ಕಳ ಹೊಣೆ ಹೊತ್ತುಕೊಂಡಿವೆ. ಸಾವುಗಳನ್ನಂತೂ ತಡೆಯಲು ಸಾಧ್ಯವಾಗದ ಸರ್ಕಾರ, ರಾಜ್ಯದಲ್ಲಿ ಅಂತಾದ್ದೊಂದು ದಿಟ್ಟ ಹೆಜ್ಜೆಯಿಡುತ್ತಾ..? ಹಣವಿರುವವರು ಇತ್ತ ಗಮನ ಹರಿಸಿದರೆ ಎಷ್ಟೋ ಮಕ್ಕಳ ಬಾಳಲ್ಲಿ ಬೆಳಕು ಮೂಡುವುದಂತೂ ನಿಶ್ಚಿತ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery