` ಗುಂಡಿನ ಹಾಡಿನ ಖ್ಯಾತಿಯ ಭಂಗೀರಂಗ ನಿಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗುಂಡಿನ ಹಾಡಿನ ಖ್ಯಾತಿಯ ಭಂಗೀರಂಗ ನಿಧನ
Lyricist Bangi Ranga Rao

ಭಂಗೀರಂಗ ಎಂದೇ ಖ್ಯಾತರಾಗಿದ್ದ ಶ್ರೀರಂಗ ವಿಧಿವಶರಾಗಿದ್ದಾರೆ. ಚಿತ್ರ ಸಾಹಿತಿಯಾಗಿ, ಸಂಭಾಷಣೆಕಾರರಾಗಿ, ಕಥೆಗಾರರಾಗಿದ್ದ ಶ್ರೀರಂಗರನ್ನು ಚಿತ್ರರಂಗ ಗುರುತಿಸಿದ್ದ ಭಂಗೀರಂಗ ಎಂದೇ. 86 ವರ್ಷ ವಯಸ್ಸಿನ ಭಂಗೀರಂಗ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

ನಂಜುಂಡಿ ಕಲ್ಯಾಣ ಚಿತ್ರದ ಒಳಗೆ ಸೇರಿದರೆ ಗುಂಡು, ಗಜಪತಿ ಗರ್ವಭಂಗ ಚಿತ್ರದ ಜಟಕಾ ಕುದುರೆ ಹತ್ತಿ.., ಅಪ್ಪು ಚಿತ್ರದ ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ.., ಅಭಿ ಚಿತ್ರದ ಸುಮ್ ಸುಮ್ನೆ ಓಳು ಬಿಡೋ ಸುಂದರಿ.., ಹೀಗೆ ಹಿಟ್ ಹಾಡುಗಳನ್ನೇ ಸೃಷ್ಟಿಸಿದ್ದ ಭಂಗೀರಂಗ ಚಿತ್ರಕಥೆ, ಸಂಭಾಷಣೆಯಲ್ಲೂ ಹೆಸರುವಾಸಿಯಾಗಿದ್ದರು.

ಭೂಲೋಕದಲ್ಲಿ ಯಮರಾಜ ಚಿತ್ರದಿಂದ ಚಿತ್ರಕಥೆಯನ್ನು ವೃತ್ತಿಯಾಗಿಸಿಕೊಂಡಿದ್ದ ಭಂಗೀರಂಗ ಅಂಜದಗಂಡು, ಮುತ್ತೈದೆ ಭಾಗ್ಯ, ಪುಗ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ, ಶುಕ್ರದೆಶೆ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.

ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿರುವ ಶ್ರೀರಂಗ, ನಾಗರಭಾವಿಯಲ್ಲಿ ನೆಲೆಸಿದ್ದರು. ವಯೋಸಹಜವಾಗಿ ಮೃತಪಟ್ಟಿದ್ದಾರೆ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery