` ಕೆ.ಮಂಜು ಹೆಸರಲ್ಲಿ ಮೆಸೇಜ್ ಬಂತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆ.ಮಂಜು ಹೆಸರಲ್ಲಿ ಮೆಸೇಜ್ ಬಂತಾ..?
K Manju

ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ನಮಗೆ ಪರಿಚಿತರೇ ಆಗಿರುವವರ ಹೆಸರಲ್ಲಿ ನಕಲಿ ಐಡಿಗಳು ಸೃಷ್ಟಿಯಾಗಿ, ಆ ಮೂಲಕ ಅವರ ಪರಿಚಿತರಿಗೆ ಕಷ್ಟದಲ್ಲಿದ್ದೇನೆ, ಸಹಾಯ ಮಾಡಿ ಎಂಬ ಮೆಸೇಜುಗಳು ರವಾನೆಯಾಗುತ್ತಿದ್ದವು. ಇದು ಪೊಲೀಸರ ಹೆಸರಲ್ಲೂ ನಡೆದಾಗ ಕ್ರಮಗಳು ಬಿಗಿಯಾಗಿದ್ದವು. ಅದೀಗ ನಿರ್ಮಾಪಕ ಕೆ.ಮಂಜು ಹೆಸರಲ್ಲೂ ಶುರುವಾಗಿದೆ.

ಕಷ್ಟದಲ್ಲಿದ್ದೇನೆ, ಸಹಾಯ ಮಾಡಿ ಎಂಬ ಹೆಸರಿನಲ್ಲಿ, ಅರ್ಜೆಂಟಾಗಿ ನನ್ನ ಅಕೌಂಟಿಗೆ 10 ಸಾವಿರವನ್ನೋ.. 15 ಸಾವಿರವನ್ನೋ ಹಾಕಿ.. ಎಂಬ ಮೆಸೇಜುಗಳು ಹಲವರಿಗೆ ಬರುತ್ತಿವೆ.

ನಾನಂತೂ ಯಾರಲ್ಲೂ ಹಣ ಕೇಳಿಲ್ಲ. ಯಾರೋ ನನ್ನ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂನವರಿಗೂ ದೂರು ಕೊಡಲಿದ್ದೇನೆ. ದಯವಿಟ್ಟು ಯಾರೂ ಹಣ ಹಾಕಿ ಮೋಸ ಹೋಗಬೇಡಿ ಎಂದು ಕೇಳಿಕೊಂಡಿದ್ದಾರೆ ಕೆ.ಮಂಜು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery