` ಕೊರೊನಾ : ಶಂಖನಾದ ಅರವಿಂದ್ ವಿಧಿವಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೊರೊನಾ : ಶಂಖನಾದ ಅರವಿಂದ್ ವಿಧಿವಶ
Shankanaada Aravind

ಕನ್ನಡ ಚಿತ್ರರಂಗ ಕೊರೊನಾದಿಂದಾಗಿ ಮತ್ತೊಬ್ಬ ಪ್ರತಿಭಾನ್ವಿತ ಕಲಾವಿದನನ್ನು ಕಳೆದುಕೊಂಡಿದೆ. ಶಂಖನಾದ ಅರವಿಂದ್ ಕೊರೊನಾಗೆ ಬಲಿಯಾಗಿದ್ದಾರೆ. ಅರವಿಂದ್ ಅವರಿಗೆ 10 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. 2 ದಿನಗಳ ಹಿಂದಷ್ಟೇ ವಿಕ್ಟೋರಿಯಾಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅರವಿಂದ್ ಮೃತಪಟ್ಟಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಶಂಖನಾದ ಚಿತ್ರದ ಮೂಲಕ ಅವರ ಹೆಸರಿನ ಜೊತೆಗೆ ಶಂಖನಾದವೂ ಸೇರಿಕೊಂಡಿತ್ತು. ಬೆಟ್ಟದ ಹೂ ಚಿತ್ರದ ಪಾತ್ರವೂ ಖ್ಯಾತವಾಗಿತ್ತು. ಗಪ್‍ಚುಪ್ ಎಂಬ ಸಿನಿಮಾವನ್ನೂ ನಿರ್ಮಾಣ ಮಾಡಿದ್ದ ಅರವಿಂದ್, ಮತ್ತೊಂದು ಚಿತ್ರದ ನಿರ್ಮಾಣದ ತಯಾರಿಯಲ್ಲಿದ್ದರು. ಕಾಶಿನಾಥ್ ಚಿತ್ರಗಳಲ್ಲಿ ಖಾಯಮ್ಮಾಗಿರುತ್ತಿದ್ದ ಅರವಿಂದ್ ಅಪರಿಚಿತ, ಆಗಂತುಕ.. ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅವಕಾಶಗಳು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಪಕ್ಕ ವಾದ್ಯ ನುಡಿಸುವ ಕೆಲಸ ಮಾಡುತ್ತಿದ್ದರು.

ಅರವಿಂದ್ ನಟಿಸಿರುವ ಕೊನೆಯ ಚಿತ್ರ ಸಾರಾ. ನಟಿಸಬೇಕಿದ್ದ ಚಿತ್ರ ಜೇಮ್ಸ್. ಜೇಮ್ಸ್ ಚಿತ್ರದಲ್ಲಿನ ಅವರ ಪಾತ್ರದ ಚಿತ್ರೀಕರಣ ಇನ್ನೂ ಮುಗಿದಿರಲಿಲ್ಲ.