` ಪಡುಕೋಣೆ ಫ್ಯಾಮಿಲಿ ಕಂಪ್ಲೀಟ್ ಕೊರೊನಾ ಪಾಸಿಟಿವ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪಡುಕೋಣೆ ಫ್ಯಾಮಿಲಿ ಕಂಪ್ಲೀಟ್ ಕೊರೊನಾ ಪಾಸಿಟಿವ್
Padukone Family Tests Positive For Corona

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಇಡೀ ಕುಟುಂಬ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದೆ. ದೀಪಿಕಾ ಪಡುಕೋಣೆ ಅವರ ತಂದೆ, ದೇಶದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ತಾಯಿ ಉಜಾಲಾ, ದೀಪಿಕಾ ಅವರ ಪತಿ ರಣ್‍ವೀರ್ ಸಿಂಗ್, ತಂಗಿ ಅನಿಶಾ ಪಡುಕೋಣೆ ಎಲ್ಲರಿಗೂ ಪಾಸಿಟಿವ್ ಆಗಿದೆ.

ಸದ್ಯಕ್ಕೆ ಆಸ್ಪತ್ರೆಯಲ್ಲಿರೋದು ಪ್ರಕಾಶ್ ಪಡುಕೋಣೆ ಮಾತ್ರ. ಅವರೂ ಕೂಡಾ ಮೂರ್ನಾಲ್ಕು ದಿನಗಳಲ್ಲಿ ಡಿಸ್‍ಚಾರ್ಜ ಆಗಲಿದ್ದಾರೆ. ಉಳಿದಂತೆ ಎಲ್ಲರೂ ಮನೆಯಲ್ಲೇ ಇದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ಮುಂಬೈನಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರಿದ್ದಾಗ ದೀಪಿಕಾ ಪಡುಕೋಣೆ ತಮ್ಮ ಪತಿಯೊಂದಿಗೆ ಬೆಂಗಳೂರಿಗೆ ಬಂದಿಳಿದಿದ್ದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery