` ಕೋವಿಡ್ ಗೆದ್ದು ಪ್ಲಾಸ್ಮಾ ದಾನ ಮಾಡಿದ ನಟಿ ಕಾವ್ಯಾ ಶಾಸ್ತ್ರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೋವಿಡ್ ಗೆದ್ದು ಪ್ಲಾಸ್ಮಾ ದಾನ ಮಾಡಿದ ನಟಿ ಕಾವ್ಯಾ ಶಾಸ್ತ್ರಿ
Kavya Shastri

ನಟಿ ಕಾವ್ಯಾಶಾಸ್ತ್ರಿ ಕಳೆದ ನವೆಂಬರ್‍ನಲ್ಲಿ ಕೊರೊನಾಗೆ ತುತ್ತಾಗಿದ್ದರು. ಕೊರೊನಾವನ್ನು ಮಣಿಸಿ ಬಂದ ಕಾವ್ಯಾ ಶಾಸ್ತ್ರಿ ಈಗ ಪ್ಲಾಸ್ಮಾ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ನನ್ನ ತಂದೆಗೆ ದಾನಿಯೊಬ್ಬರು ಪ್ಲಾಸ್ಮಾ ನೀಡಿ ಬದುಕಿಸಿದ್ದರು. ನನಗೆ ಪ್ಲಾಸ್ಮಾ ಮಹತ್ವ ಗೊತ್ತಾಗಿದ್ದೇ ಆಗ. ಅದೆಷ್ಟೋ ಜನ ಪ್ಲಾಸ್ಮಾ ನೀಡಲು ಮುಂದೆ ಬರುತ್ತಿಲ್ಲ. ಏಕೋ ಏನೋ ಹೆದರುತ್ತಿದ್ದಾರೆ. ಅದಕ್ಕಾಗಿಯೇ ನಾನು ಪ್ಲಾಸ್ಮಾ ದಾನ ಮಾಡಿದ್ದನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ನಟಿ ಕಾವ್ಯಾ ಶಾಸ್ತ್ರಿ.

ಕೊರೊನಾ ಬಂದು ಹೋದ ಮೇಲೆ 28 ದಿನ ಕಳೆದ ನಂತರ ಪ್ರತಿಯೊಬ್ಬರೂ ಪ್ಲಾಸ್ಮಾ ದಾನ ಮಾಡಬಹುದು. ಕೊರೊನಾ ಗೆದ್ದವರು 6 ತಿಂಗಳವರೆಗೆ ಈ ರೀತಿ ಪ್ಲಾಸ್ಮಾ ನೀಡಬಹುದು. ಯಾವುದೇ ಅಡ್ಡಪರಿಣಾಮಗಳಿಲ್ಲ. ಇದು ವೈದ್ಯರೇ ದೃಢೀಕರಿಸಿರುವ ಅಧಿಕೃತ ಚಿಕಿತ್ಸಾ ಕ್ರಮಗಳಲ್ಲಿ ಒಂದು. ಹೀಗೆ ಪ್ರತಿ ಅಂಶವನ್ನೂ ಬಿಡಿಸಿ ಬಿಡಿಸಿ ಹೇಳಿದ್ದಾರೆ ಕಾವ್ಯಾ ಶಾಸ್ತ್ರಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery