` ಕ್ರೇಜಿಸ್ಟಾರ್`ಗೆ ಎಸ್.ಮಹೇಂದರ್ ಆ್ಯಕ್ಷನ್ ಕಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕ್ರೇಜಿಸ್ಟಾರ್`ಗೆ ಎಸ್.ಮಹೇಂದರ್ ಆ್ಯಕ್ಷನ್ ಕಟ್
Ravichandran, S Mahender

ಎಸ್.ಮಹೇಂದರ್. ಇದುವರೆಗೆ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಸೆನ್ಸೇಷನ್ ಸಿನಿಮಾಗಳನ್ನು ಸೃಷ್ಟಿಸಿರುವ ಮಹೇಂದರ್, ಅಂಬಿ, ಶಿವಣ್ಣ, ರಮೇಶ್, ಉಪ್ಪಿ, ರಾಮ್‍ಕುಮಾರ್ ಬಿ.ಸಿ.ಪಾಟೀಲ್.. ಹೀಗೆ ತಮ್ಮ ಜನರೇಷನ್‍ನ ಎಲ್ಲರೊಂದಿಗೂ ಕೆಲಸ ಮಾಡಿದವರು. ಆದರೆ, ರವಿಚಂದ್ರನ್ ಜೊತೆ ಮಾತ್ರ ಸಿನಿಮಾ ಸಾಧ್ಯವಾಗಿರಲಿಲ್ಲ. ಎಷ್ಟೋ ಬಾರಿ ಹೀಗೆ ಬಂದ ಅವಕಾಶ ಹಾಗೆ ಜಾರಿ ಹೋಗುತ್ತಿತ್ತು. ಅದೆಲ್ಲದಕ್ಕೂ ಈಗ ಕಾಲ ಕೂಡಿ ಬಂದಂತಿದೆ.

ಈಗ ಮಹೇಂದರ್, ರವಿಚಂದ್ರನ್ ಅವರಿಗಾಗಿಯೇ ಕಥೆಯೊಂದನ್ನು ರೆಡಿ ಮಾಡಿದ್ದಾರಂತೆ. ಸ್ಕ್ರಿಪ್ಟ್ ಮುಗಿದಿದ್ದು, ರವಿಚಂದ್ರನ್ ಓಕೆ ಕೂಡಾ ಹೇಳಿದ್ದಾರಂತೆ. ಕೊರೊನಾ ಸಂಕಟ ಮುಗಿದ ಕೂಡಲೇ ಶೂಟಿಂಗ್ ಶುರು ಎಂದಿದ್ದಾರೆ ಮಹೇಂದರ್. ಲಾಕ್ ಡೌನ್ ಮುಗಿದ ಮೇಲೆ ಚಿತ್ರದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರಂತೆ ಮಹೇಂದರ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery