` ಸುದೀಪ್ ಚೇತರಿಕೆ : ಮುಂದಿನ ವಾರ ಬರ್ತಾರಾ ಬಿಗ್ ಬಾಸ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸುದೀಪ್ ಚೇತರಿಕೆ : ಮುಂದಿನ ವಾರ ಬರ್ತಾರಾ ಬಿಗ್ ಬಾಸ್..?
Kiccha Sudeep

ಕಳೆದ 2 ವಾರಗಳಿಂದ ಅನಾರೋಗ್ಯದಿಂದಾಗಿ ವಿಶ್ರಾಂತಿಯಲ್ಲಿದ್ದ ಕಿಚ್ಚ ಸುದೀಪ್, ಈಗ ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲ, ಶೀಘ್ರದಲ್ಲೇ ಸೆಟ್‍ಗೆ ಬರುವುದಾಗಿಯೂ ಹೇಳಿದ್ದಾರೆ. ಕಳೆದ ವಾರ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುದೀಪ್, ಶುಕ್ರವಾರ ಡಿಸ್‍ಚಾರ್ಜ್ ಆಗಿದ್ದರು.

`ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಡಾ.ವೆಂಕಟೇಶ್ ಮತ್ತು ಡಾ.ವಿನಯ್ ಅವರಿಗೆ ಧನ್ಯವಾದಗಳು. ಅಭಿಮಾನಿಗಳು ಹಲವು ಕಡೆ ಪೂಜೆ ಮಾಡಿಸಿದ ವಿಡಿಯೋಗಳನ್ನು ನೋಡಿದೆ. ನಿಮ್ಮೆಲ್ಲರ ಪ್ರೀತಿಗೆ ಅಭಾರಿ. ಐ ಲವ್ ಯೂ ಎಂದಷ್ಟೇ ಹೇಳಬಲ್ಲೆ' ಎಂದಿದ್ದಾರೆ ಸುದೀಪ್.

ಬಹುಶಃ ಈ ವೀಕೆಂಡ್ ಸಾಧ್ಯವಾಗದೇ ಹೋಗಬಹುದು. ಮುಂದಿನ ವಾರ ಸುದೀಪ್ ತೆರೆಯ ಮೇಲೆ ಬರೋದಂತೂ 100% ಪಕ್ಕಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery