` ಶಶಾಂಕ್ ಹುಡುಕಿದ ಹೀರೋ ಡಾಕ್ಟರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶಶಾಂಕ್ ಹುಡುಕಿದ ಹೀರೋ ಡಾಕ್ಟರ್
Shashank Director

ಶಶಾಂಕ್, ಕನ್ನಡದ ಸ್ಟಾರ್ ನಿರ್ದೇಶಕರಷ್ಟೇ ಅಲ್ಲ, ಸ್ಟಾರ್ ಕಲಾವಿದರನ್ನು ಹುಟ್ಟುಹಾಕುವ ಕಲಾವಿದರು. ಹೊಸ ಪ್ರತಿಭೆಗಳನ್ನು ಹುಡುಕುವುದರಲ್ಲಿ ನಿಷ್ಣಾತರಾಗಿರುವ ಶಶಾಂಕ್, ಈ ಬಾರಿಯೂ ಹೊಸದೊಂದು ಪ್ರತಿಭೆಯನ್ನು ಹುಡುಕಿ ಹೀರೋ ಮಾಡುತ್ತಿದ್ದಾರೆ.

ಜೂನ್‍ನಿಂದ ಶುರುವಾಗಲಿರುವ ಎಮೋಷನಲ್ ಲವ್ ಸ್ಟೋರಿಗೆ ಶಶಾಂಕ್ ಹುಡುಕಿರುವ ಹೀರೋ ಪ್ರವೀಣ್. ಈತ ವೃತ್ತಿಯಲ್ಲಿ ಡಾಕ್ಟರ್ ಎನ್ನುವುದು ವಿಶೇಷ. ಶಶಾಂಕ್ ಅವರ ಹೊಸ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲವಾದರೂ, ಕಥೆ ಫೈನಲ್ ಆಗಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಎನ್ನುವುದೂ ಫೈನಲ್ ಆಗಿದೆ. ಶಶಾಂಕ್, ಮೊಗ್ಗಿನ ಮನಸ್ಸು ನಂತರ ಫ್ರೆಶ್ ಫೇಸ್ ಇಟ್ಟುಕೊಂಡೇ ಮಾಡುತ್ತಿರುವ ಸಿನಿಮಾ ಇದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery