ಕೊರೊನಾ ಹೆಮ್ಮಾರಿ ಯಾರನ್ನೂ ಬಿಡುತ್ತಿಲ್ಲ. ಚಿತ್ರರಂಗದಲ್ಲಂತೂ ಪ್ರತಿದಿನವೂ ಕೊರೊನಾಘಾತವೇ. ಒಬ್ಬರು.. ಇಬ್ಬರು.. ಮತ್ತೊಬ್ಬರು.. ಹೀಗೆ.. ಇದರ ನಡುವೆ ನಟ ಕೋಮಲ್, ಕೊರೊನಾಗೆ ತುತ್ತಾಗಿ ಅತೀವ ಸಂಕಷ್ಟಕ್ಕೂ ಸಿಲುಕಿ ಇದೀಗ ಗೆದ್ದು ಬಂದಿದ್ದಾರೆ.
ನಟ ಕೋಮಲ್ ಅವರಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಡಿತ್ತು. ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿ ಕಾವಲಿಗೆ ನಿಂತಿದ್ದರು ಅಣ್ಣ ಜಗ್ಗೇಶ್. ಕೊರೊನಾ ಇದ್ದ ಕಾರಣ ದೂರದಿಂದ ನೋಡುವಂತೆಯೂ ಇರಲಿಲ್ಲ. ಎಲ್ಲ ಭಾರವನ್ನೂ ಗುರುರಾಯರ ಮೇಲೆ ಹಾಕಿದ್ದ ಜಗ್ಗೇಶ್ ಅವರಿಗೆ ಕೊನೆಗೂ ನಿರಾಳತೆ ಸಿಕ್ಕಿದೆ. ಕೋಮಲ್ ಇನ್ನೂ ಕೊರೊನಾದಿಂದ ಗುಣಮುಖವಾಗಿಲ್ಲ. ಆದರೆ, ಉಸಿರಾಟದ ಸಮಸ್ಯೆಯ ಅಪಾಯದಿಂದ ಪಾರಾಗಿದ್ದಾರೆ. ಎಲ್ಲವೂ ಗುರುರಾಯರ ಕೃಪೆ ಎಂದಿದ್ದಾರೆ ಜಗ್ಗೇಶ್.