ಕಣ್ಣೇ ಅದಿರಿಂದಿ ಖ್ಯಾತಿಯ ಮಂಗ್ಲಿ, ನೋಡೋಕೂ ಅಂದಗಾತಿ. ತಮ್ಮದೇ ಆಲ್ಬಂ ಸಾಂಗ್‍ಗಳಲ್ಲಿ ಈಗಾಗಲೇ ಸಾಕಷ್ಟು ಮಿಂಚಿರುವ ಮಂಗ್ಲಿ ಈಗ ಶಿವಣ್ಣ ಜೊತೆ ತೆರೆಯೇರಲು ಸಿದ್ಧರಾಗಿದ್ದಾರೆ.
ಶಿವಣ್ಣ ಅಭಿನಯದ 124ನೇ ಸಿನಿಮಾ, ರಾಮ್ ಧುಲಿಪುಡಿ ನಿರ್ದೇಶನದ ಚಿತ್ರಕ್ಕೆ ಮಂಗ್ಲಿ ಹೀರೋಯಿನ್ ಎನ್ನಲಾಗುತ್ತಿದೆ. ಶ್ರೀಕಾಂತ್ ಧುಲಿಪುಡಿ ಮತ್ತು ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಾಣದ ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಆದರೆ, ಮಂಗ್ಲಿ ನಾಯಕಿ ಎನ್ನುವ ಸುದ್ದಿ ದೊಡ್ಡದಾಗಿಯೇ ಕೇಳಿ ಬಂದಿದೆ. ಜೂನ್ ಮೊದಲ ವಾರ ಶೂಟಿಂಗ್ ಶುರುವಾಗಲಿದ್ದು, ಅಷ್ಟು ಹೊತ್ತಿಗೆ ಸುದ್ದಿ ಅಧಿಕೃತವಾಗಲಿದೆ.