ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ. ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಒಂದು ಉನ್ನತ ಸ್ಥಾನಕ್ಕೇರಿದವರು. ನಟಿಯಾಗಿ ಮೋಹಕ ತಾರೆಯಾಗಿ, ಸ್ಯಾಂಡಲ್‍ವುಡ್ ಕ್ವೀನ್ ಆಗಿ ಮೆರೆದ ರಮ್ಯಾ, ಇವತ್ತಿಗೂ ಕನ್ನಡಿಗರ ಹಾರ್ಟ್ ಫೇವರಿಟ್ ನಟಿ. ಅತ್ತ ರಾಜಕೀಯದಲ್ಲೂ ಸಂಸದೆಯಾಗಿ, ಕಾಂಗ್ರೆಸ್‍ನಲ್ಲಿ ರಾಷ್ಟ್ರೀಯ ಮಟ್ಟದ ನಾಯಕಿಯಾಗಿ ಗುರುತಿಸಿಕೊಂಡಿದ್ದ ರಮ್ಯಾ, ಈಗ ಆ ಎರಡೂ ಕ್ಷೇತ್ರಗಳಿಗೆ ಗುಡ್ ಬೈ ಹೇಳಿರೋದಾಗಿ ಹೇಳಿದ್ದಾರೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದ ರಮ್ಯಾ, ಸಿನಿಮಾ ತಮ್ಮ ಜೀವನದಲ್ಲಿನ್ನು ಮುಗಿದ ಅಧ್ಯಾಯ ಎಂದಿದ್ದಾರೆ. ಅಷ್ಟೇ ಅಲ್ಲ, ರಾಜಕೀಯದಲ್ಲಿರ್ತೀರಾ ಎಂಬ ಪ್ರಶ್ನೆಗೂ ಇಲ್ಲ, ರಾಜಕೀಯದಲ್ಲೂ ಇರಲ್ಲ ಎಂದಿದ್ದಾರೆ.
ಹಾಗಾದರೆ ಮತ್ತೇನು ಮಾಡ್ತೀರಿ ಎಂಬ ಪ್ರಶ್ನೆಗೆ ನಥಿಂಗ್ ರಿಯಲೀ.. ಸಾಮಾನ್ಯ ಬದುಕು ಬದುಕುತ್ತಿರುವೆ. ಎಲ್ಲರೂ ಮಾಡುವಂತ ಸಾಮಾನ್ಯ ಕೆಲಸವನ್ನೇ ಮಾಡುತ್ತಿದ್ದೇನೆ.
ಒಟ್ಟಿನಲ್ಲೀಗ ಪ್ರತಿದಿನ ವ್ಯಾಯಾಮ, ನಾಯಿಗಳ ಜೊತೆ ಆಟ, ಮನೆಗೆಲಸ, ಕ್ಲೀನಿಂಗ್, ಪುಸ್ತಕಗಳನ್ನು ಓದುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. ಅಂದಹಾಗೆ ರಮ್ಯಾ ಇತ್ತೀಚೆಗೆ ಓದಿದ ಪುಸ್ತಕ `ದ ಪ್ರಾಬ್ಲಂ ಆಫ್ ಅದರ್ ಮೈಂಡ್'.