ರಕ್ಷಿತಾ ಮತ್ತು ರಮ್ಯಾ. ಒಂದು ದಶಕವಿಡೀ ಚಿತ್ರರಂಗವನ್ನು ಆಳಿದವರು. ರಕ್ಷಿತಾ ಬೇರೆ ಭಾಷೆಗಳಲ್ಲೂ ಕ್ರೇಜಿ ಕ್ವೀನ್ ಆಗಿ ಮೆರೆದವರು. ಸ್ಯಾಂಡಲ್‍ವುಡ್‍ನ ಮೋಹಕ ತಾರೆಯಾದವರು ರಮ್ಯಾ. ಒಂದು ಕಾಲದ ಸ್ಪರ್ಧಿಗಳು. ಅವರನ್ನು ಮೀರಿಸಲು ಇವರು.. ಇವರನ್ನು ಮೀರಿಸಲು ಅವರು.. ನಡೆಸುತ್ತಿದ್ದ ಫೈಟ್ಸ್ ಕಥೆಗಳು ಸ್ಯಾಂಡಲ್‍ವುಡ್‍ನಲ್ಲಿ ಜೀವಂತವಾಗಿವೆ. ಅವರಿಬ್ಬರ ಮಧ್ಯೆ ಇದ್ದ ಲವ್ & ಹೇಟ್ ಸ್ಟೋರಿ, ಸೀರೆಯಿಂದ ಬಹಿರಂಗವಾಗಿದೆ.
ಇತ್ತೀಚೆಗೆ ಹುಟ್ಟಹಬ್ಬ ಆಚರಿಸಿಕೊಂಡ ರಕ್ಷಿತಾ ಅವರಿಗೆ ರಮ್ಯಾ ಒಂದು ಚೆಂದದ ಸೀರೆಯನ್ನು ಗಿಫ್ಟ್ ಆಗಿ ಕಳಿಸಿಕೊಟ್ಟಿದ್ದಾರೆ. ನೀನಿಲ್ಲದೆ ನನ್ನ ಸಿನಿ ಜೀವನ ಅಪರಿಪೂರ್ಣವಾಗುತ್ತಿತ್ತು. ಕಿಸ್ ಕಿಸ್ ಅಂತಾ ಶುಭಾಶಯ ಕಳಿಸಿದ್ದಾರೆ ರಮ್ಯಾ.
ಇದಕ್ಕೆ ಧನ್ಯವಾದ ಹೇಳಿರೋ ರಕ್ಷಿತಾ, ನೀನು ಹೇಳಿದ್ದು ನಿಜ, ನೀನಿಲ್ಲದೆ ನನ್ನ ಸಿನಿ ಲೈಫ್ ಜರ್ನಿ ನಿಜಕ್ಕೂ ಇನ್ ಕಂಪ್ಲೀಟ್ ಆಗಿರುತ್ತಿತ್ತು ಎಂದಿದ್ದಾರೆ.