` ಸುದೀಪ್ ಇಲ್ಲದ ಬಿಗ್ ಬಾಸ್ : ಕೊರೊನಾ ಕಾರಣಾನಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸುದೀಪ್ ಇಲ್ಲದ ಬಿಗ್ ಬಾಸ್ : ಕೊರೊನಾ ಕಾರಣಾನಾ..?
Sudeep Big Boss

ಇದು 8 ವರ್ಷಗಳಿಂದ ನಿಂತಿಲ್ಲ. ವಾರದ ಕೊನೆಯಲ್ಲಿ ವಾರದ ಕಥೆ ಹೇಳೋಕೆ ಬಿಗ್‍ಬಾಸ್ ಶೋಗೆ ಕಿಚ್ಚ ಬರಲೇಬೇಕು. ಆದರೆ.. 8 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಇಲ್ಲ. ಅನಾರೋಗ್ಯ ಕಾರಣದಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ.

ಅಯ್ಯೋ.. ಸುದೀಪ್ ಅವರಿಗೇನಾದರೂ ಕೊರೊನಾ ಪಾಸಿಟಿವ್ ಬಂದುಬಿಟ್ಟಿದೆಯಾ.. ಎನ್ನಬೇಡಿ. ಇಲ್ಲ. ಮೂಲಗಳ ಪ್ರಕಾರ ಸುದೀಪ್ ಅವರಿಗೆ ಕೊರೊನಾ ಪಾಸಿಟಿವ್ ಅಥವಾ ಅಂತಹ ಯಾವುದೇ ಲಕ್ಷಣಗಳೂ ಇಲ್ಲ. ಸುದೀಪ್ ಅವರಿಗೆ ಸದ್ಯಕ್ಕೆ ಬೇಕಿರುವುದು ವಿಶ್ರಾಂತಿ. ಅನಾರೋಗ್ಯವಿದ್ದಾಗ ಹೊರಗೆ ಹೋಗುವುದು ಬೇಡ.. ಅದೂ ಈ ಕೊರೊನಾ ಟೈಮಲ್ಲಿ ಎಂದು ನಿರ್ಧರಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ ಕಿಚ್ಚ ಸುದೀಪ್.

ಹೀಗಾಗಿ ಈ ವಾರ ಬಿಗ್ ಬಾಸ್ ಶೋನಲ್ಲಿ ಕಿಚ್ಚ ಸುದೀಪ್ ಇರಲ್ಲ. ಹಾಗಾದರೆ ಯಾರು ಇರುತ್ತಾರೆ..? ಗೊತ್ತಿಲ್ಲ. ಸುದೀಪ್ ಇಲ್ಲದ ಕಾರಣಕ್ಕೆ ಬಿಗ್ ಬಾಸ್ ಶೋನಲ್ಲಿ ಹೊಸ ಹೊಸ ಇಂಟ್ರೆಸ್ಟಿಂಗ್ ಆಟಗಳನ್ನು ತರಲಾಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery