` ತಮಿಳು ಕಲಾವಿದ ವಿವೇಕ್ ಹಠಾತ್ ನಿಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತಮಿಳು ಕಲಾವಿದ ವಿವೇಕ್ ಹಠಾತ್ ನಿಧನ
Tamil Actor Vivek

ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾದ ವಿವೇಕ್ ಹಠಾತ್ ನಿಧನರಾಗಿದ್ದಾರೆ. ಗುರುವಾರವಷ್ಟೇ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ ನಟ ವಿವೇಕ್ ಅವರಿಗೆ ಹಠಾತ್ ಹೃದಯ ಸ್ತಂಭನವಾಗಿದೆ. 59 ವರ್ಷದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಆದರೆ, ಹೃದಯದ ರಕ್ತನಾಳಗಳು ಕಂಪ್ಲೀಟ್ ಬ್ಲಾಕ್ ಆಗಿದ್ದವಂತೆ. ಕೃತಕವಾಗಿ ರಕ್ತವನ್ನು ಪಂಪ್ ಮಾಡುವ ಪ್ರಯತ್ನವೂ ಕೈಗೂಡಲಿಲ್ಲ. ಹೀಗಾಗಿ ವೈದ್ಯರ ಪರಿಶ್ರಮ ಫಲ ನೀಡಲಿಲ್ಲ. ಅಂದಹಾಗೆ, ವ್ಯಾಕ್ಸಿನ್‍ಗೂ, ಹೃದಯ ಸ್ತಂಭನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ವೈದ್ಯರು. ಏಕೆಂದರೆ ವಿವೇಕ್ ಅವರಿಗೆ ಈಗಾಗಲೇ ಅಂಜಿಯೋಗ್ರಾಮ್ ಮತ್ತು ಅಂಜಿಯೋಪ್ಲಾಸ್ಟಿ ಆಗಿತ್ತು.

ಪದ್ಮಶ್ರೀ ಪುರಸ್ಕಾರಕ್ಕೂ ಪಾತ್ರರಾಗಿದ್ದ ವಿವೇಕ್ ಅವರಿಗೆ ಶಿವಾಜಿ ಚಿತ್ರ ದೊಡ್ಡ ಹೆಸರು ತಂದುಕೊಟ್ಟಿತ್ತು. ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ತಮಿಳು ಚಿತ್ರರಂಗದ ಎಲ್ಲ ದಿಗ್ಗಜರೊಂದಿಗೆ ನಟಿಸಿದ್ದ ವಿವೇಕ್, ಕನ್ನಡದಲ್ಲೂ ನಟಿಸಿದ್ದರು. ಪ್ರೇಮ್ ಅವರ ಚಂದ್ರಾ ಸೇರಿದಂತೆ ಒಂದೆರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery