ಆಗಸ್ಟ್ 19. 2021. ಡೇಟ್ ನೋಟ್ ಮಾಡಿಟ್ಟುಕೊಳ್ಳಿ. ಆ ದಿನ ವಿಕ್ರಾಂತ್ ರೋಣ, ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಪ್ರತ್ಯಕ್ಷವಾಗ್ತಾನೆ. 2019ರಲ್ಲಿ ಬಂದ ಪೈಲ್ವಾನ್ ನಂತರ ಕಿಚ್ಚನ ಅಭಿಮಾನಿಗಳಿಗೆ ಸುದೀಪ್ ಹೀರೋ ಆಗಿ ಸಿಕ್ಕಿಲ್ಲ. ಅಭಿಮಾನಿಗಳ ಕಿಚ್ಚಿನಂತಾ ಬಯಕೆ ಈಡೇರುವ ಕಾಲ.. ಮುಹೂರ್ತ ಆಗಸ್ಟ್ 19. 2021.
ರಿಲೀಸ್ ಡೇಟ್ ಅನೌನ್ಸ್ ಮಾಡಿರೋ VR ಟೀಂ, ಇದರ ಜೊತೆಯಲ್ಲೇ ಇನ್ನೊಂದು ಸರ್ಪ್ರೈಸ್ನ್ನೂ ಕೊಟ್ಟಿದೆ. ವಿಕ್ರಾಂತ್ ರೋಣ 3D ಅವತಾರದಲ್ಲಿ ಬರಲಿದ್ದಾನೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರದಲ್ಲಿ
ಕಥೆ ಏನು ಎನ್ನುವುದೇ ಒಂದು ಸರ್ಪ್ರೈಸ್. ಕಿಚ್ಚನ ಜೊತೆಗೆ ನಿರೂಪ್ ಭಂಡಾರಿ ಕೂಡಾ ಇದ್ದಾರೆ. ನೀತಾ ಅಶೋಕ್ ಹೀರೋಯಿನ್.
ಜಾಕ್ ಮಂಜು ನಿರ್ಮಾಣದ ಸಿನಿಮಾ ಆಗಸ್ಟ್ನಲ್ಲಿ ಸ್ವಾತಂತ್ರ್ಯೋತ್ಸವ ಮುಗಿದ 4ನೇ ದಿನಕ್ಕೆ ಸರಿಯಾಗಿ ಥಿಯೇಟರುಗಳಲ್ಲಿ ಕಾಣಿಸಲಿದೆ.