Print 
yash,

User Rating: 0 / 5

Star inactiveStar inactiveStar inactiveStar inactiveStar inactive
 
ಸಾರಿಗೆ ನೌಕರರಿಗೆ ಡ್ರೈವರ್ ಮಗ ಯಶ್ ಕೊಟ್ಟ ಸಂದೇಶ
Yash

ಯಶ್, ದೇಶಾದ್ಯಂತ ರಾಕಿಭಾಯ್, ರಾಕಿಂಗ್ ಸ್ಟಾರ್ ಆದರೂ, ತಮ್ಮ ಬೇರುಗಳನ್ನು ಮರೆತವರೇನೂ ಅಲ್ಲ. ತಮ್ಮ ತಂದೆ ಕೆಎಸ್ಆರ್ಟಿಸಿ ಡ್ರೈವರ್ ಅನ್ನೋದನ್ನು ಮುಚ್ಚಿಟ್ಟವರೂ ಅಲ್ಲ. ಬದಲಿಗೆ ಹೆಮ್ಮೆಯಿಂದ ಹೇಳಿಕೊಂಡೇ ಬಂದವರು. ಈಗ ಸಾರಿಗೆ ನೌಕರರು ಹೆಚ್ಚೂ ಕಡಿಮೆ ತಿಂಗಳಿಂದ ಮುಷ್ಕರದಲ್ಲಿದ್ದಾರೆ. ಸರ್ಕಾರ ತಮ್ಮ ಕಷ್ಟಕ್ಕೆ ಕಿವಿ ಕೊಡುತ್ತಿಲ್ಲ. ನೀವು ಬೆಂಬಲ ನೀಡಿ ಎಂದು ಕೆಲವು ಸಾರಿಗೆ ನೌಕರರು ಯಶ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಯಶ್ ಸ್ಪಂದಿಸಿದ್ದಾರೆ.

ಕೇವಲ ಸ್ಪಂದಿಸಿದ್ದಷ್ಟೇ ಅಲ್ಲ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಜೊತೆ ಮಾತುಕತೆಯನ್ನೂ ಆಡಿದ್ದಾರೆ. ಯಶ್ ಇಂದು ಏನೇ ಆಗಿರಬಹುದು ಆದರೆ ಮೊದಲು ಪ್ರಾಮಾಣಿಕ ಚಾಲಕನ ಪುತ್ರ. ನಮ್ಮ ತಂದೆ ಕೆಲಸಕ್ಕೆ ತಡವಾಗುತ್ತೆ ಎಷ್ಟೋ ಜನರು ಬಸ್ಸಿಗಾಗಿ ಕಾಯುತ್ತಿರುತ್ತಾರೆ ಎಂದು ಅದೆಷ್ಟೋ ದಿನ ತಿಂಡಿಯನ್ನೂ ತಿನ್ನದೆ ಕೆಲಸಕ್ಕೆ ಹೋದ ದಿನಗಳು  ಇನ್ನೂ ನನ್ನ ನೆನಪಿನಲ್ಲಿದೆ. ನಿಮ್ಮ ಸಮಸ್ಯೆ ಬಗ್ಗೆ ಸಾರಿಗೆ ಸಚಿವರ ಬಳಿ ಚರ್ಚೆ ಮಾಡಿದ್ದೇನೆ. ಸಂಸ್ಥೆಯಲ್ಲಿ ಇರೋ ಸಮಸ್ಯೆಗಳನ್ನ ನಾನು ಹತ್ತಿರದಿಂದ ಬಲ್ಲವನು. ವೇತನ ತಾರತಮ್ಯವನ್ನ ಆದಷ್ಟು ಬೇಗ ಬಗೆ ಹರಿಸಿಕೊಡುವುದಾಗಿ ನನಗೆ ಭರವಸೆ ನೀಡಿದ್ದಾರೆ. ಸಮಸ್ಯೆಗೆ ಸಮಸ್ಯೆಯೇ ಪರಿಹಾರವಲ್ಲ. ವಿರಸ ಬಿಟ್ಟು ಸಾಮರಸ್ಯದಿಂದ ಬಾಳೋಣ ಎಂದಿದ್ದಾರ ಯಶ್.

ನೇರವಾಗಿ ಅಲ್ಲದೇ ಹೋದರೂ, ಪ್ರತಿಭಟನೆ ಕೈಬಿಟ್ಟು ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂಬ ಪರೋಕ್ಷ ಸಂದೇಶ ಕೊಟ್ಟಿದ್ದಾರೆ ಯಶ್.