ಯುವರತ್ನ ಚಿತ್ರಕ್ಕೆ ಸಿಕ್ಕಿರುವ ಮೆಚ್ಚುಗೆಯಿಂದ ಖುಷಿಯಲ್ಲಿರೋ ಪುನೀತ್ ರಾಜ್‍ಕುಮಾರ್ ಮತ್ತು ಹೊಂಬಾಳೆ ಫಿಲಂಸ್ ಹೊಸದೊಂದು ಸಿನಿಮಾ ಘೋಷಿಸಿದೆ. ಈ ಹೊಸ ಚಿತ್ರದಲ್ಲಿ ಪುನೀತ್ ಅವರೇ ಹೀರೋ. ಹೊಂಬಾಳೆಯವರದ್ದೇ ಪ್ರೊಡಕ್ಷನ್. ಡೈರೆಕ್ಷನ್ ಹೊಣೆ ಲೂಸಿಯಾ ಪವನ್ ಅವರದ್ದು.
ಲೂಸಿಯಾ, ಯು-ಟರ್ನ್ ನಂತಾ ವಿಭಿನ್ನ ಕಥಾಹಂದರದ ಚಿತ್ರಗಳನ್ನು ನೀಡಿದ ಪವನ್, ಹೊಸ ಬಗೆಯ ಚಿತ್ರಗಳ ಹುಡುಕಾಟದಲ್ಲಿ ಎತ್ತಿದ ಕೈ. ಸದ್ಯಕ್ಕೆ ಪುನೀತ್ ಭರ್ಜರಿ ಚೇತನ್ ಅವರ ಜೇಮ್ಸ್‍ನಲ್ಲಿ ಬ್ಯುಸಿ. ಅದು ಮುಗಿದ ಕೂಡಲೇ ದಿನಕರ್ ತೂಗುದೀಪ್ ಅವರ ಸಿನಿಮಾ ಇದೆ. ಆ ಎರಡೂ ಪ್ರಾಜೆಕ್ಟ್ ಮುಗಿದ ಮೇಲೆ ವಿಜಯ್ ಕಿರಗಂದೂರು ಜೊತೆಯಾಗ್ತಾರಾ..? ಅಥವಾ ಎರಡೆರಡು ಪ್ರಾಜೆಕ್ಟ್‍ಗಳನ್ನು ಒಟ್ಟಿಗೇ ಶುರು ಮಾಡಿಕೊಳ್ತಾರಾ..? ಸದ್ಯಕ್ಕೆ ಉತ್ತರವಿಲ್ಲ.
ಅತ್ತ ಪವನ್ ಕೂಡಾ ತೆಲುಗಿನ ಕುಡಿ ಎಡಮೈತೆ ವೆಬ್ ಸಿರೀಸ್‍ನಲ್ಲಿ ಬ್ಯುಸಿಯಿದ್ದಾರೆ. ಇತ್ತ ವಿಜಯ್ ಕಿರಗಂದೂರು ಕೂಡಾ ಯುವರತ್ನದ ಕೆಲಸ ಮುಗಿಸಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.