ಜೋಗಿ ಪ್ರೇಮ್ ಚಿತ್ರ ಎಂದರೆ ಹಾಡುಗಳ ಮೇಲೆ ಭಾರಿ ನಿರೀಕ್ಷೆಗಳಿದ್ದೇ ಇರುತ್ತವೆ. ಅದು ಅವರೇ ಸೃಷ್ಟಿಸಿಕೊಂಡಿರೋ ಟ್ರೆಂಡ್. ಏಕ್ ಲವ್ ಯಾ ಕೂಡಾ ಅದಕ್ಕೆ ಹೊರತಾಗಿಲ್ಲ. ರಕ್ಷಿತಾ ಪ್ರೇಮ್ ಸೋದರ ರಾಣಾ ಹೀರೋ ಆಗಿ ನಟಿಸಿರೋ ಚಿತ್ರದಲ್ಲಿ ಇಬ್ಬರು ಹೀರೋಯಿನ್ ಇದ್ದಾರೆ. ರೀಷ್ಮಾ ನಾಣಯ್ಯ ಮತ್ತು ರಚಿತಾ ಪ್ರೇಮ್. ರೀಷ್ಮಾ ಜೊತೆ ರೊಮ್ಯಾನ್ಸ್, ರಚಿತಾ ಜೊತೆ ಕಿಸ್ಸಿಂಗ್ ಸೀನ್ ನೋಡಿರುವ ಪ್ರೇಕ್ಷಕರಿಗೆ ಚಿತ್ರದಲ್ಲಿರೋ ಕಥೆಯ ಬಗ್ಗೆ ಕುತೂಹಲ ಇದ್ದೇ ಇದೆ. ಇದರ ನಡುವೆಯೇ ಇನ್ನೊಂದು ಹಾಡು ಬಿಟ್ಟಿದ್ದಾರೆ ಪ್ರೇಮ್.
ಮುಗ್ಧ ಪ್ರೇಮಿಯೊಬ್ಬನ ವಿರಹ, ಆಕ್ರೋಶ ಎರಡೂ ಇರೋ ಹೇಳು ಯಾಕೆ ಹಾಡು.. ವಿಷಾದ ಗೀತೆಯಂತೆ ಎನಿಸಿದ್ದರೆ ಕ್ರೆಡಿಟ್ಟು ಜೋಗಿ ಪ್ರೇಮ್ ಅವರಿಗೆ. ಎದೆಯೊಳಗಿನ ಪ್ರೀತಿಯನ್ನೆಲ್ಲ ಹೊರಗೆ ಹಾಕುವ ಹಾಡಿನಂತೆ ಕೇಳಿಸಿದ್ದರೆ, ಅದರ ಕ್ರೆಡಿಟ್ಟೂ ಪ್ರೇಮ್ ಅವರಿಗೇ. ಅರ್ಜುನ್ ಜನ್ಯ ಮ್ಯೂಸಿಕ್ಕಿನಲ್ಲಿರೋ ಹಾಡಿಗೆ ಸಾಹಿತ್ಯ ಬರೆದು ಹಾಡನ್ನು ಸ್ವತಃ ಹಾಡಿರುವುದು ಪ್ರೇಮ್.
ಪ್ರೇಮಿಗಳ ದಿನಕ್ಕೆ ಯಾರೇ ಯಾರೇ.. ನೀನು ನಂಗೆ.. ಹಾಡು ರಿಲೀಸ್ ಮಾಡಿದ್ದ ಪ್ರೇಮ್, ಯುಗಾದಿಗೆ ಹೇಳು ಯಾಕೆ ಹಾಡು ಬಿಟ್ಟಿದ್ದಾರೆ.