ತಾಳಿ ಕಟ್ಟುವ ಆ ಶುಭ ವೇಳೆಯಲ್ಲಿ ಗುರು ಹಿರಿಯರೆಲ್ಲರ ಜೊತೆಗೆ ವಧುವಿನ ಮಡಿಲಲ್ಲಿ ಮಗುವೂ ಇದ್ದರೆ..
ನಮ್ ಕಾಲ್ದಲ್ ಹಿಂಗಿರಲಿಲ್ಲ. ಆವಾಗ.. ಎನ್ನುತ್ತಾ ಹಳೆ ಕಥೆ ಶುರು ಮಾಡಬೇಡಿ. ಇದು ಹೊಸ ಕಥೆ. ಕಥೆ ಹೇಳ್ತಿರೋದು ಹರಿ ಸಂತೋಷ್. ಧನ್ವೀರ್, ಶ್ರೀಲೀಲಾ ನಟನೆಯ ಬೈ ಟೂ ಲವ್ ಚಿತ್ರದ ಹೊಸ ಪೋಸ್ಟರ್ ಈ ಕಾರಣಕ್ಕೇ ಕುತೂಹಲ ಹುಟ್ಟಿಸಿದೆ.
ಯುಗಾದಿ ಹಬ್ಬಕ್ಕೆಂದೇ ರಿಲೀಸ್ ಮಾಡಿರುವ ಪೋಸ್ಟರ್ನಲ್ಲಿ ಧನ್ವೀರ್, ಶ್ರೀಲೀಲಾಗೆ ಮಾಂಗಲ್ಯ ಧಾರಣೆ ಮಾಡುತ್ತಿರುವ ಪೋಸ್ಟರ್ನಲ್ಲಿ ಶ್ರೀಲೀಲಾ ತೊಡೆ ಮೇಲೆ ಮಗುವೂ ಇದೆ. ಯಾಕೆ.. ಏನು.. ಹೇಗೆ.. ಎನ್ನೋದನ್ನೆಲ್ಲ ಕೇಳಬೇಡಿ. ಕೆವಿಎನ್ ಪ್ರೊಡಕ್ಷನ್ಸ್ನ ಬೈ ಟೂ ಕಾಫಿ ಇಂತಹ ಇನ್ನಷ್ಟು ಅಚ್ಚರಿಗಳನ್ನಿಟ್ಟುಕೊಂಡಿದೆಯಂತೆ..