` ದೃಶ್ಯ 2 ಅಂತೂ ಪಕ್ಕಾ ಆಯ್ತು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ದೃಶ್ಯ 2 ಅಂತೂ ಪಕ್ಕಾ ಆಯ್ತು..!
Drishyam 2

ದೃಶ್ಯ. ವಿ.ರವಿಚಂದ್ರನ್ ಅವರಿಗೆ ಒಂದು ರೀತಿಯಲ್ಲಿ ಕಮ್ ಬ್ಯಾಕ್ ಸಿನಿಮಾ. ಅತ್ತ ದೃಶ್ಯ ಚಿತ್ರದ ಒರಿಜಿನಲ್ ಮಲಯಾಳಂನಲ್ಲಿ ದೃಶ್ಯ 2 ಸೀಕ್ವೆಲ್ ಸಂಚಲನ ಮೂಡಿಸಿದ ದಿನದಿಂದಲೇ ಕನ್ನಡದಲ್ಲಿ ಯಾವಾಗ ಅನ್ನೋ ಪ್ರಶ್ನೆ ಕೇಳುತ್ತಿದ್ದರು ಅಭಿಮಾನಿಗಳು.

ದೃಶ್ಯ 2ವನ್ನು ಮಲಯಾಳದಲ್ಲಿ ನೋಡಿದವರೂ ಕೂಡಾ, ಇದನ್ನು ಕನ್ನಡದಲ್ಲಿ ಮಾಡಿ, ರವಿಚಂದ್ರನ್-ಪಿ.ವಾಸು ಜೋಡಿಯೇ ಇರಲಿ ಎನ್ನುತ್ತಿದ್ದರು. ಆ ಬೇಡಿಕೆಗೆ ಈಗ ಫಲ ಸಿಕ್ಕಿದೆ. ಪಿ.ವಾಸು ಮತ್ತು ವಿ.ರವಿಚಂದ್ರನ್ ಇಬ್ಬರೂ ಒಟ್ಟಗೂಡಿ ದೃಶ್ಯ-2 ಗೆ ಸೈ ಎಂದಿದ್ದಾರೆ.

ಒನ್ಸ್ ಎಗೇಯ್ನ್, ದೃಶ್ಯ ನಿರ್ಮಿಸಿದ್ದ ಇ4 ಎಂಟರ್‍ಟೈನ್‍ಮೆಂಟ್ ಸಂಸ್ಥೆಯೇ ದೃಶ್ಯ-2ಗೂ ಬಂಡವಾಳ ಹೂಡುತ್ತಿದೆ. ಸದ್ಯಕ್ಕೆ ಸಿಕ್ಕಿರೋ ಡೀಟೈಲ್ಸ್ ಇಷ್ಟು ಮಾತ್ರ.