` ಮದಗಜ ಹೀರೋ ಹಂಗೆ.. ಹೀರೋಯಿನ್ ಹಿಂಗೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮದಗಜ ಹೀರೋ ಹಂಗೆ.. ಹೀರೋಯಿನ್ ಹಿಂಗೆ..
Madagaja Movie Image

ಮದಗಜ ಚಿತ್ರದ ಮೊದಲೆರಡು ಟೀಸರ್ ನೋಡಿದ್ದವರಿಗೆ ಇದೊಂದು ಭರ್ಜರಿ ಆ್ಯಕ್ಷನ್ ಸಿನಿಮಾ ಎನಿಸಿದ್ದರೆ ತಪ್ಪಲ್ಲ. ಅಷ್ಟರಮಟ್ಟಿಗೆ ಪವರ್ ಫುಲ್ ಡೈಲಾಗ್ಸ್.. ಶ್ರೀಮುರಳಿಯ ಬೆಂಕಿ ಕಣ್ಣುಗಳಿದ್ದವು. ಆದರೆ.. ಯುಗಾದಿಗೆ ಬಿಟ್ಟಿರೋ ಇನ್ನೊಂದು ಟೀಸರ್‍ನಲ್ಲಿ ಬೇರೆಯದದ್ದೇ ಲೋಕ ತೋರಿಸಿದ್ದಾರೆ ಅಯೋಗ್ಯ ಮಹೇಶ್.

ಯುಗಾದಿಯ ಮದಗಜ ಟೀಸರ್‍ನಲ್ಲಿ ಹೈಲೈಟ್ ಆಗಿರೋದು ಆಶಿಕಾ ರಂಗನಾಥ್. ಅಪ್ಪಟ ರೈತ ಮಗಳಾಗಿ ಕಾಣಿಸಿರೋ ಆಶಿಕಾ, ಶ್ರೀಮುರಳಿಯ ಜೊತೆ ಮುದ್ದಾಗಿ ಕಾಣಿಸಿಕೊಳ್ತಾರೆ. ಹಾಗಾದರೆ.. ಇಲ್ಲೊಂದು ಚೆಂದದ ಲವ್ ಸ್ಟೋರಿ ಇದೆಯಾ..?

ಉಮಾಪತಿ ನಿರ್ಮಾಣದ ಚಿತ್ರ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಅನ್ನೋದರ ಸುಳಿವಂತೂ ಇದುವರೆಗಿನ ಟೀಸರ್‍ಗಳು ಕೊಟ್ಟಿವೆ.