ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ನಟಿಸಿರುವ ಹೊಸ ಸಿನಿಮಾ. ಚಿತ್ರದ ಬಗ್ಗೆ ದಿನ ದಿನಕ್ಕೂ ನಿರೀಕ್ಷೆಗಳನ್ನು ಮುಗಿಲು ಮುಟ್ಟಿಸುತ್ತಿರುವ ವಿಕ್ರಾಂತ್ ರೋಣ ಚಿತ್ರತಂಡ ಈಗೊಂದು ಹೊಸ ಡೇಟ್ ಮತ್ತು ಟೈಂ ಘೋಷಿಸಿದೆ. ಏಪ್ರಿಲ್ 15, ಬೆಳಗ್ಗೆ 11.10.
ಆಗ ಚಿತ್ರತಂಡ ಚಿತ್ರದ ಕುರಿತ ಯಾವುದೋ ಒಂದು ವಿಷಯವನ್ನು ಘೋಷಿಸಲಿದೆ. ಅದೇನು ಅನ್ನೋದೇ ಸಸ್ಪೆನ್ಸ್. ಚಿತ್ರೀಕರಣವನ್ನು ಹೆಚ್ಚೂ ಕಡಿಮೆ ಮುಗಿಸಿದ್ದರೂ ಇದೂವರೆಗೆ ಹೀರೋಯಿನ್ ಯಾರು ಅನ್ನೋ ಗುಟ್ಟನ್ನೇ ಬಿಟ್ಟುಕೊಟ್ಟಿಲ್ಲ. ಶ್ರದ್ಧಾ ಶ್ರೀನಾಥ್ ಇರಬಹುದು ಎಂಬ ಸುದ್ದಿ ಹೊರಬಿತ್ತಾದರೂ, ಅತ್ತ ನಿರ್ಮಾಪಕ ಜಾಕ್ ಮಂಜುನೂ ಯೆಸ್ ಎನ್ನಲಿಲ್ಲ. ಇತ್ತ ಶ್ರದ್ಧಾ ಕೂಡಾ ನೋ ಎನ್ನಲಿಲ್ಲ. ಡೈರೆಕ್ಟರ್ ಅನೂಪ್ ಭಂಡಾರಿಯೂ ಹ್ಞಾಂಹ್ಞೂಂ ಎನ್ನಲಿಲ್ಲ. ಬ್ರೇಕ್ ಆಗಲಿರೋ ಸಸ್ಪೆನ್ಸ್ ಅದೇನಾ..?
ಅಥವಾ ಚಿತ್ರದ ರಿಲೀಸ್ ಡೇಟ್‍ನ್ನೇ ಅನೌನ್ಸ್ ಮಾಡ್ತಾರಾ..? ವೇಯ್ಟ್.. ಏಪ್ರಿಲ್ 15, ಬೆಳಗ್ಗೆ 11.10.