ನೈಟ್ ಕಫ್ರ್ಯೂ ಬೇಕಿತ್ತೋ.. ಬೇಕಿರಲಿಲ್ಲವೋ.. ವಿವಾದ, ಚರ್ಚೆಗಳ ನಡುವೆಯೇ ಎದುರಾಗಿದೆ. ಫೇಸ್ ಮಾಡಬೇಕು, ಅಷ್ಟೆ. ಬೇರೆ ದಾರಿಯಿಲ್ಲ. ಇದು ದೊಡ್ಡ ಹೊಡೆತ ನೀಡಿರುವುದು ಚಿತ್ರರಂಗಕ್ಕೆ. ಅದರಲ್ಲಿ ಅನುಮಾನವೇ ಇಲ್ಲ. ಇದು ಆ ಹೊಡೆತದ ಇನ್ನೊಂದು ಅಪ್‍ಡೇಟ್, ಅಷ್ಟೆ.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ 8 ನಗರಗಳಲ್ಲಿ ನೈಟ್ ಕಫ್ರ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ನೈಟ್ ಕಫ್ರ್ಯೂ ಇರೋ ನಗರಗಳಲ್ಲಿ ಇಂದಿನಿಂದ ನೈಟ್ ಶೋ ಸಿನಿಮಾ ಇರೋದಿಲ್ಲ. ಅರ್ಥಾತ್ ಸೆಕೆಂಡ್ ಶೋ ಇರೋದಿಲ್ಲ. ಏಕೆಂದರೆ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ಗಳು 9.30ರ ಒಳಗೆ ಜಾಗ ಖಾಲಿ ಮಾಡಿ ಬೀಗ ಹಾಕಬೇಕು. 50% ವೀಕ್ಷಕರೂ ಇರೋ ಹಾಗಿಲ್ಲ. ಹೀಗಾಗಿ 9.30ರ ನಂತರ ಯಾವ ಸಿನಿಮಾ ಶೋ ತೋರಿಸೋಕೆ ಸಾಧ್ಯ.. ಅಲ್ವೇ..
ಹ್ಞಾಂ.. ನೀವಿರೋ ನಗರದಲ್ಲಿ ನೈಟ್ ಕಫ್ರ್ಯೂ ಇದ್ಯಾ..?