Print 
shivarakumar bhajarangi 2, sid sriram,

User Rating: 0 / 5

Star inactiveStar inactiveStar inactiveStar inactiveStar inactive
 
ಸಾಮಜರಗಮನ ಗಾಯಕನಿಂದ ಭಜರಂಗಿ2ಗೆ ಹಾಡು
ಸಾಮಜರಗಮನ ಗಾಯಕನಿಂದ ಭಜರಂಗಿ2ಗೆ ಹಾಡು

ಸಿದ್ ಶ್ರೀರಾಮ್, ಮೂಲತಃ ತೆಲುಗಿನ ಗಾಯಕ. ಇತ್ತೀಚೆಗೆ ಅವರ ಅಲವೈಕುಂಠಪುರಂಲೋ ಚಿತ್ರದ ಸಾಮಜಗರಮನ.. ಹಾಡು ಸೂಪರ್ ಡ್ಯೂಪರ್ ಹಿಟ್ ಎನಿಸಿತ್ತು. ಟಾಮ್ & ಜೆರ್ರಿ ಚಿತ್ರದಲ್ಲೂ ಹಾಡಿರುವ ಸಿದ್ದ್ ಶ್ರೀರಾಮ್, ಭಜರಂಗಿ 2ನಲ್ಲಿ ಗುಂಗು ಹಿಡಿಸುವ ಹಾಡಿಗೆ ಧ್ವನಿಯಾಗಿದ್ದಾರೆ.

ಭಜರಂಗಿ 2 ಹೇಳಿ ಕೇಳಿ ಶಿವಣ್ಣ-ಹರ್ಷ-ಜಯಣ್ಣ ಕಾಂಬಿನೇಷನ್ನಿನ ಸಿನಿಮಾ. ಮ್ಯೂಸಿಕ್ ಕೊಟ್ಟಿರುವುದು ಅರ್ಜುನ್ ಜನ್ಯಾ. ನೀ ಸಿಗೋವರೆಗೂ.. ಎಂಬ ಭಾವನೆಗಳೇ ತುಂಬಿದ ಗೀತೆಗೆ ಸಾಹಿತ್ಯ ನೀಡಿರುವುದು ಕೆ.ಕಲ್ಯಾಣ್.

ಈ ಹಿಂದೆ ರಿಲೀಸ್ ಆಗಿದ್ದ ಹಾಡು ಎದೆಯಲ್ಲಿ ಢಮಢಮಢಮ ಎನಿಸಿದ್ದರೆ, ಈ ಹಾಡು ಗುಂಗು ಹಿಡಿಸುತ್ತಿದೆ.