ತಮಟೆ ಹೊಡಿ ಬಾರೋ..
ಎಂಟ್ರಿ ಕೊಟ್ಟ ಹೀರೋ..
ತರುತಾನೆ ಹರುಷ.. ಅವತಾರ ಪುರುಷ..
ಶರಣ್-ಸುನಿ-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಸಿನಿಮಾ ಅವತಾರ ಪುರುಷ ಚಿತ್ರದ ಹಾಡಿನ ಸಾಲುಗಳಿವು. ಹೀರೋ ಇಂಟ್ರೊಡಕ್ಷನ್ ಸಾಂಗ್ ಅಥವಾ ಚಿತ್ರದ ಟೈಟಲ್ ಟ್ರ್ಯಾಕ್. ಏನು ಬೇಕಾದರೂ ಹೇಳಬಹುದು. ಹಾಡನ್ನು ಭರ್ಜರಿಯಾಗಿ ಶೂಟ್ ಮಾಡಿರುವ ಸುನಿ, ಹಾಡನ್ನು ಪವರ್‍ಫುಲ್ ಕನ್ನಡದ ಯುವಜನತೆಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ.
ಕಿರಣ್ ಕೊಟ್ಟ, ಆರ್‍ಆರ್ ಅರ್ಜುನ್‍ರ ಸಾಹಿತ್ಯಕ್ಕೆ ತಮಟೆ ಸೌಂಡು ಸಖತ್ತಾಗಿ ಮ್ಯಾಚ್ ಆಗಿದೆ. ಹಾಡಿನ ಸಾಹಿತ್ಯಕ್ಕೆ ಅಷ್ಟೇ ಸಖತ್ತಾಗಿ ಕೂರಿಸಿರೋದು ಅರ್ಜುನ್ ಜನ್ಯಾ. ಶರಣ್ ಮತ್ತು ಆಶಿಕಾ ರಂಗನಾಥ್ ಹೀರೋ ಹೀರೋಯಿನ್ ಆಗಿರುವ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.