ಸಿನಿಮಾವೊಂದು ಇಷ್ಟೆಲ್ಲ ರೀತಿಯಲ್ಲಿ ಸಂಚಲನ ಸೃಷ್ಟಿಸಬಹುದೇ ಎಂಬ ಪ್ರಶ್ನೆ ಹುಟ್ಟಿಸಿರುವುದು ಯುವರತ್ನ. ಸರ್ಕಾರದಿಂದ ಉದ್ಭವವಾದ ಸಡನ್ ಪ್ರಾಬ್ಲಂನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಯುವರತ್ನ ಸಿನಿಮಾ, ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಈಗ ಮಠಾಧೀಶರ ಸರದಿ.
ಕಾಗಿನೆಲೆಯ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಡಿವೈಎಸ್ಪಿ ಶ್ರೀ ನರಸಿಂಹ ತಾಮ್ರಧ್ವಜ, ಹರಿಹರಿ ಸಿಪಿಐ ಸತೀಶ್, ಪಿಎಸ್ಐ ವೀರೇಶ್ ಮೊದಲಾದವರು ಒಟ್ಟಿಗೇ ಹೋಗಿ ಸಿನಿಮಾ ನೋಡಿದ್ದಾರೆ.
ಸಿನಿಮಾ ನೋಡಿ ಬಂದ ಮೇಲೆ ಸ್ವತಃ ಪುನೀತ್ ಅವರಿಗೆ ಕರೆ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದೀರಿ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ ಎಂದು ಹಾರೈಸಿದ್ದಾರೆ. ವಿವಿಧ ಸಮುದಾಯದ ಪ್ರಮುಖ ಸ್ವಾಮೀಜಿಗಳು ಒಟ್ಟಿಗೇ ಸಿನಿಮಾ ನೋಡಿದ್ದೇ ವಿಶೇಷವಾಗಿತ್ತು.
ಇತ್ತ ಥಿಯೇಟರುಗಳಿಗೆ 50% ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಥಿಯೇಟರುಗಳ ಜೊತೆಗೆ ಒಟಿಟಿಯಲ್ಲೂ ರಿಲೀಸ್ ಆಗಿರುವ ಸಿನಿಮಾ ಯುವರತ್ನ, ಎಲ್ಲ ಕಡೆಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.