Print 
dhruva sarja, dubaari,

User Rating: 0 / 5

Star inactiveStar inactiveStar inactiveStar inactiveStar inactive
 
ಧ್ರುವ ಸರ್ಜಾರ ದುಬಾರಿಗೆ ಬ್ರೇಕ್..?
Dhruva Sarja

ಪೊಗರು ರಿಲೀಸ್ ಆಗುವ ಮುನ್ನವೇ ಸೆಟ್ಟೇರಿದ್ದ ಸಿನಿಮಾ ದುಬಾರಿ. ಧ್ರುವ ಸರ್ಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಬೇಕಿದ್ದ ಚಿತ್ರಕ್ಕೆ ಡೈರೆಕ್ಟರ್ ಆಗಿದ್ದವರು ನಂದ ಕಿಶೋರ್. ಆದರೆ.. ಇದ್ದಕ್ಕಿದ್ದಂತೆ ಬೇರೆಯದೇ ಸುದ್ದಿ ಬರುತ್ತಿದೆ. ನಿರ್ಮಾಪಕ ಉದಯ್ ಮೆಹ್ತಾ ಡೈರೆಕ್ಟರ್ ಬದಲಾವಣೆಗೆ ಮುಂದಾಗಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

ಈ ಸುದ್ದಿಗೆ ಪುಷ್ಠಿ ಕೊಡುವಂತೆ ನಿರ್ದೇಶಕ ನಂದ ಕಿಶೋರ್, ಪಡ್ಡೆಹುಲಿ ಶ್ರೇಯಸ್ ಮಂಜು, ಏಕ್ ಲವ್ ಯಾ ನಾಯಕಿ ರೀಷ್ಮಾ ನಾಣಯ್ಯ ಅವರ ಹೊಸ ಚಿತ್ರದ ಕೆಲಸ ಶುರು ಮಾಡಿದ್ದಾರೆ. ದುಬಾರಿ ನಿಧಾನಕ್ಕೆ ಟೇಕಾಫ್ ಆಗಲಿದೆಯಂತೆ. ಡೈರೆಕ್ಟರ್ ಬದಲಾಗ್ತಾರಾ..? ವೇಯ್ಟ್.. ವೇಯ್ಟ್.. ವೇಯ್ಟ್.