` ಪೊಗರು ನಂದಕಿಶೋರ್ ಜೊತೆ ಪಡ್ಡೆಹುಲಿ ಮಂಜು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪೊಗರು ನಂದಕಿಶೋರ್ ಜೊತೆ ಪಡ್ಡೆಹುಲಿ ಮಂಜು
Nandakishore, Shreyas K Manju

ಪಡ್ಡೆಹುಲಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಭರವಸೆ ಮೂಡಿಸಿರುವ ನಟ ಶ್ರೇಯಸ್ ಮಂಜು. ಕನ್ನಡದ ಖ್ಯಾತ ನಿರ್ಮಾಪಕ  ಕೆ.ಮಂಜು ಪುತ್ರ ಶ್ರೇಯಸ್, ಪ್ರತಿಭಾವಂತ ನಟ ಅನ್ನೋದನ್ನು ಪಡ್ಡೆಹುಲಿಯಲ್ಲಿ ಪ್ರೂವ್ ಮಾಡಿದ್ದರು. ಈಗ ವಿಷ್ಣುಪ್ರಿಯ ಎಂಬ ಚಿತ್ರದ ಮೂಲಕ ಹೊಸತನಕ್ಕೆ ಒಡ್ಡಿಕೊಂಡಿರುವ ಶ್ರೇಯಸ್ ಮಂಜು, ಮುಂದಿನ ಚಿತ್ರವನ್ನು ನಂದಕಿಶೋರ್ ಜೊತೆ ಮಾಡಲಿದ್ದಾರೆ.

ಏಪ್ರಿಲ್ 5ರಂದು ಹೊಸ ಚಿತ್ರದ ಘೋಷಣೆಯಾಗಿದ್ದು, ಗುಜ್ಜಲ್ ಪುರುಷೋತ್ತಮ್ ನಿರ್ಮಾಪಕ. ಕೆ.ಪಿ.ಶ್ರೀಕಾಂತ್ ಜೊತೆ ಟಗರು ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಪುರುಷೋತ್ತಮ್ಮ, ಈಗ ತಮ್ಮದೇ ಗುಜ್ಜಲ್ ಟಾಕೀಸ್ ಸ್ಥಾಪಿಸಿದ್ದು, ಆ ಸಂಸ್ಥೆಯ ಮೊದಲ  ಸಿನಿಮಾ ಶ್ರೇಯಸ್ ಮಂಜು ಮತ್ತು ನಂದಕಿಶೋರ್ ಕಾಂಬಿನೇಷನ್‍ನಲ್ಲಿ ಬರಲಿದೆ.