Print 
yash,

User Rating: 0 / 5

Star inactiveStar inactiveStar inactiveStar inactiveStar inactive
 
ಜಿಮ್ ಬೆಂಬಲಕ್ಕೆ ರಾಕಿಂಗ್ ಸ್ಟಾರ್ : 50% ಓಕೆ
ಜಿಮ್ ಬೆಂಬಲಕ್ಕೆ ರಾಕಿಂಗ್ ಸ್ಟಾರ್ : 50% ಓಕೆ

ಪುನೀತ್ ಅಭಿಮಾನಿಗಳ ಪ್ರತಿಭಟನೆ, ಚಿತ್ರರಂಗದ ಒಗ್ಗಟ್ಟಿನ ಹೋರಾಟಕ್ಕೆ ಮಣಿದ ಸರ್ಕಾರ ಸಿನಿಮಾಗಳಿಗೆ ಹೇರಿದ್ದ ನಿರ್ಬಂಧವನ್ನೇನೋ ಸಡಿಲಿಸಿತು. ಆದರೆ, ಜಿಮ್`ನವರ ಬೇಡಿಕೆ ಹಾಗೆಯೇ ಇತ್ತು. ಈಗ ಅವರ ಬೇಡಿಕೆಯೂ ಈಡೇರಿದೆ. ಸಿನಿಮಾದವರಂತೆಯೇ ಜಿಮ್‍ನವರೂ ಹೆಚ್ಚೂ ಕಡಿಮೆ ಒಂದು ವರ್ಷ ಬಾಗಿಲು ಮುಚ್ಚಿದ್ದರು. ಜಿಮ್‍ನವರಿಗೂ ಸರ್ಕಾರದಿಂದ ಒಂದೇ ಒಂದು ಸಣ್ಣ ಸಹಕಾರವೂ ಸಿಕ್ಕಿರಲಿಲ್ಲ. ಚಿತ್ರಮಂದಿರಗಳಿಗೆ 50% ಎಂದಿದ್ದ ಸರ್ಕಾರ, ಜಿಮ್‍ಗಳನ್ನು 100% ಕ್ಲೋಸ್ ಮಾಡೋಕೆ ಹೊರಟಿತ್ತು. ಈಗ ಒತ್ತಾಯ, ಪ್ರತಿಭಟನೆಗಳ ನಂತರ 50%ಗೆ ಓಕೆ ಎಂದಿದೆ.

ಜಿಮ್‍ನವರ ಹೋರಾಟಕ್ಕೆ ರಾಕಿಂಗ್ ಸ್ಟಾರ್ ಬೆಂಬಲ ಸೂಚಿಸಿದ್ದರು. ಅನ್ನ ಹುಟ್ಟಿಸದ ಸಭೆ, ಸಮಾರಂಭಗಳು ಮುಕ್ತ. ಹೊಟ್ಟೆ ಹೊರೆಯಲು ಮಾಡುವ ವ್ಯಕ್ತಿಗಳಿಗೆ ಹೊಡೆತ. ಅಪಘಾತ ಆಗುತ್ತದೆಂದು ವಾಹನ ಸಂಚಾರ ನಿಲ್ಲಿಸೋದು ಸರಿಯಾಗುತ್ತದೆಯೇ..? ಕಟ್ಟುನಿಟ್ಟಿನ ಸಂಚಾರ ಕ್ರಮ ಸಾಕಲ್ಲವೇ..? ಹಾಗೇ ಸಾಲ ಸೋಲ ಮಾಡಿ ಜಿಮ್ ನಡೆಸುವವರು ಕಷ್ಟಪಡುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಜಿಮ್ ಬಳಸಲು ಅವಕಾಶ ನೀಡಿದರೆ, ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು. ಜಿಮ್ ಮಾಲೀಕರು ಬದುಕಿಕೊಳ್ಳುತ್ತಾರಲ್ಲವೇ? ಎಂದಿದ್ದರು ಯಶ್. ಆದರೆ, ಅದೆಲ್ಲದಕ್ಕಿಂತ ಹೆಚ್ಚಾಗಿ ಅದೇ ಬರಹದ ಕೊನೆಯಲ್ಲಿದ್ದ ಮಾತುಗಳಲ್ಲಿ ಕೊರೊನಾ ಲಾಕ್ ಡೌನ್ ಹುಚ್ಚಾಟಕ್ಕೆ ಉತ್ತರವೂ ಇತ್ತು.

ರೋಗಕ್ಕೆ ಪರಿಹಾರ ಏನೆಂದು ಗೊತ್ತಿಲ್ಲ. ಆದರೆ ಹಸಿವಿಗೆ ಪರಿಹಾರ ಗೊತ್ತಿದೆಯಲ್ಲ.

ಜಿಮ್‍ನವರ ಹೋರಾಟವನ್ನು ದುನಿಯಾ ವಿಜಯ್ ಕೂಡಾ ಬೆಂಬಲಿಸಿದ್ದಾರೆ. ಹಾಗೆ ನೋಡಿದರೆ, ಜಿಮ್‍ನವರ ಪರ ದನಿಯೆತ್ತಿದ್ದ ಮೊದಲ ನಟ ದುನಿಯಾ ವಿಜಯ್.