Print 
rakshith shetty sakutumba sametha,

User Rating: 0 / 5

Star inactiveStar inactiveStar inactiveStar inactiveStar inactive
 
ಸಕುಟುಂಬ ಸಮೇತ ರಕ್ಷಿತ್ ಶೆಟ್ಟಿ
Sakutumba Sametha Movie Image

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇನ್ನೊಂದು ಚಿತ್ರ ಘೋಷಿಸಿದ್ದಾರೆ. ಈಗಾಗಲೇ ಕೈತುಂಬಾ ಚಿತ್ರಗಳನ್ನಿಟ್ಟುಕೊಂಡು ಇನ್ನೊಂದು ಸಿನಿಮಾಗೆ ಯೆಸ್ ಎಂದಿದ್ದಾರೆ. ಆದರೆ, ಹೀರೋ ಆಗಿ ಅಲ್ಲ. ಪ್ರೊಡ್ಯೂಸರ್ ಆಗಿ.

ರಕ್ಷಿತ್ ಜೊತೆ ಉಳಿದವರು ಕಂಡಂತೆ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ರಾಹುಲ್ ಪಿ.ಕೆ. ಅವರಿಗೆ ಡೈರೆಕ್ಷನ್ ಹೊಣೆ ಹೊರಿಸಿ, ಸಕುಟುಂಬ ಸಮೇತ ಎಂಬ ಚಿತ್ರವನ್ನು ಶುರು ಮಾಡಿಯೇಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಸದ್ದಿಲ್ಲದೆ ಶೂಟಿಂಗ್ ಕೂಡಾ ಕಂಪ್ಲೀಟ್ ಮಾಡಿಬಿಟ್ಟಿದ್ದಾರೆ. ಸಿನಿಮಾ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಲೆ, ಭರತ್ ಜಿಬಿ, ಸಿರಿ ರವಿಕುಮಾರ್, ಪುಷ್ಪಾ ಬೆಳವಾಡಿ.. ಮೊದಲಾದವರು ನಟಿಸಿರೋ ಚಿತ್ರ ಸಕುಟುಂಬ ಸಮೇತ.

ನಿರ್ಮಾಪಕರಾಗಿರುವ ರಕ್ಷಿತ್ ಶೆಟ್ಟಿಯವರಿಗೆ ನಿರ್ಮಾಣದಲ್ಲಿ ಸಾಥ್ ಕೊಟ್ಟಿರುವುದು ಒನ್ಸ್ ಎಗೇಯ್ನ್ ಪರಂವಾ ಸ್ಟುಡಿಯೋ.