Print 
K Manju, health minister sudhakar,

User Rating: 0 / 5

Star inactiveStar inactiveStar inactiveStar inactiveStar inactive
 
ಸುಧಾಕರ್ ಖಾತೆ ಬದಲಾವಣೆಗೆ ಕೇಳಿಬಂತು ಕೂಗು
K Manju, Dr Sudhakar K

ಡಾ. ಕೆ.ಸುಧಾಕರ್. ಪ್ರಸ್ತುತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೊದಲಾದವರು ಸುಧಾಕರ್ ಅವರ ಕಾರ್ಯನಿರ್ವಹಣೆ ಬಗ್ಗೆ ಆಕ್ಷೇಪ ಎತ್ತಿದ್ದರು. ಭ್ರಷ್ಟಾಚಾರದ ಆರೋಪವನ್ನೂ ಹೊರಿಸಿದ್ದರು. ಪಕ್ಷದೊಳಗೇ ಅವರ ವಿರುದ್ಧ ಅಪಸ್ವರಗಳೂ ಕೇಳಿಬಂದಿದ್ದವು. ಆದರೀಗ ರಾಜಕೀಯಕ್ಕೆ ಸಂಬಂಧವೇ ಇಲ್ಲದ ಸಿನಿಮಾ ರಂಗದಿಂದ ಸುಧಾಕರ್ ಬದಲಾವಣೆಗೆ ಒತ್ತಡ ಕೇಳಿಬಂದಿದೆ.

ಯುವರತ್ನ ಚಿತ್ರಕ್ಕೆ ದಿಢೀರ್ ಎಂದು 50% ನಿರ್ಬಂಧ ಹೇರಿದ ಬಗ್ಗೆ ಚಿತ್ರರಂಗದವರ ಕೆಂಗಣ್ಣು ಬಿದ್ದಿರುವುದು ಸುಧಾಕರ್ ಮೇಲೆ. ಸುಧಾಕರ್ ಇಂಥಾದ್ದೊಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಚಿತ್ರರಂಗದ ಒಬ್ಬರ ಬಳಿಯೂ ಸಣ್ಣ ಚರ್ಚೆಯನ್ನೂ ಮಾಡಿರಲಿಲ್ಲ. ಮಾಹಿತಿಯನ್ನೂ ಕೊಟ್ಟಿರಲಿಲ್ಲ. ಅವರದ್ದೇ ಸರ್ಕಾರದಲ್ಲಿರೋ ವಾರ್ತಾ ಸಚಿವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಬದಲಿಗೆ ಅಂತಹ ಯಾವುದೇ ಕ್ರಮ ಅಥವಾ ಆಲೋಚನೆ ಸರ್ಕಾರದ ಮುಂದಿಲ್ಲ ಎಂದು ಚಿತ್ರರಂಗದವರ ದಾರಿ ತಪ್ಪಿಸಿದ್ದರು.

ಏನ್ ಮಾಡ್ತಾ ಇದೆ ಸರ್ಕಾರ..? ಸಿನಿಮಾದವರ ಮೇಲೆ ಸುಧಾಕರ್ ಹೀಗೇಕೆ ಮುಗಿಬೀಳುತ್ತಿದ್ದಾರೆ? ಫಿಲಂ ಚೇಂಬರ್‍ಗಾಗಲೀ, ವಾರ್ತಾ ಸಚಿವರನ್ನಾಗಲೀ ಕೇಳದೆ ಇಂಥಾದ್ದೊಂದು ನಿರ್ಧಾರವನ್ನು ಹೇಗೆ ತೆಗೆದುಕೊಳ್ತಾರೆ? ಇದು ಸರಿಯಲ್ಲ. ಯಡಿಯೂರಪ್ಪನವರೇ ದಯವಿಟ್ಟು ಸುಧಾಕರ್ ಖಾತೆಯನ್ನು ಬದಲಾವಣೆ ಮಾಡಿ ಎಂದು ಆಗ್ರಹಿಸಿದ್ದಾರೆ ನಿರ್ಮಾಪಕ ಕೆ.ಮಂಜು.

ಅಷ್ಟೇ ಅಲ್ಲ, ಚಿತ್ರರಂಗಕ್ಕೆ ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್ ಪಾಠ ಮಾಡಿದ್ದ ಕೆ.ಸುಧಾಕರ್, ಸ್ವತಃ ತಾವೇ ಅದನ್ನು ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಲ್ಲಂಘಿಸಿದ್ದರು. ಇದೂ ಕೂಡಾ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.