ಕಳೆದ ಮೂರು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡಿದ್ದರು. ಪುನೀತ್ ರಾಜ್‍ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ಮಗ ಹರಿಕೃಷ್ಣನ್. ಮೈಸೂರಿನ ನಿವಾಸಿ ಮುರಳಿಧರ್ ಎಂಬುವವರ ಪುತ್ರ ಹರಿಕೃಷಣ್ಣನ್.
ಯುವರತ್ನ ಸಿನಿಮಾ ನೋಡಬೇಕು ಎಂದು ಆಸೆ ಪಟ್ಟಿದ್ದ ಮಗ. ಆದರೆ ಯುವರತ್ನ ಸಿನಿಮಾ ರಿಲೀಸ್ ಗು ಮುನ್ನ ಸಾವನಪ್ಪಿದ್ದ ಮಗ. ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ ಮಗ. ಮಗನ ಆಸೆಯನ್ನು ತೀರಿಸುವ ಸಲುವಾಗಿ ಪೋಟು ಇಟ್ಟುಕೊಂಡು ಸಿನಿಮಾ ವೀಕ್ಷಣೆ ಮಾಡಿದ ಕುಟುಂಬಸ್ಥರು.
ಮೈಸೂರಿನ ಡಿಆರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ವೀಕ್ಷಣೆ. ತಂದೆ-ತಾಯಿ-ಹಿರಿಯ ಮಗನ ಜೊತೆ ಸಿನಿಮಾ ವೀಕ್ಷಣೆ. ಸಾವನಪ್ಪಿದ ಮಗನಿಗು ಒಂದು ಟಿಕೆಟ್ ತೆಗೆದುಕೊಂಡು ಪೋಟೋ ಇಟ್ಟುಕೊಂಡು ಚಲನಚಿತ್ರ ವೀಕ್ಷಣೆ.