` ಚುಟು ಚುಟು ಹುಡುಗಿ ಈಗ ಪಟಾಕಿ ಪೋರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚುಟು ಚುಟು ಹುಡುಗಿ ಈಗ ಪಟಾಕಿ ಪೋರಿ
Ashika Ranganath

ಚುಟು ಚುಟು ಹಾಡಿನ ಮೂಲಕ ಫೇಮಸ್ ಆದ ಆಶಿಕಾ ರಂಗನಾಥ್ ಈಗ ಪಟಾಕಿ ಪೋರಿಯಾಗಿದ್ದಾರೆ. ಹೀರೋಯಿನ್ ಆಗಿಯೇ ಕೈಲಿ ನಾಲ್ಕೈದು ಚಿತ್ರಗಳಿವೆ. ಇದರ ನಡುವೆ ಐಟಂ ಸಾಂಗ್ ಬೇಕಿತ್ತಾ..? ಈ ಪ್ರಶ್ನೆಗೆ ಆಶಿಕಾ ಕೊಟ್ಟಿರೋ ಉತ್ತರವೇ ಪಟಾಕಿಯಂತಿದೆ.

ನಾನು ಈ ಹಾಡಿನಲ್ಲಿ ನನ್ನ ಪಾತ್ರ ಮತ್ತು ಹಾಡಿನಲ್ಲಿ ಯಾಱರು ಇರುತ್ತಾರೆ ಎಂಬುದನ್ನು ಮೊದಲೇ ಕೇಳಿದ್ದೆ. ಸುದೀಪ್ ಸರ್ ಇರುತ್ತಾರೆ ಎಂದು ಗೊತ್ತಾಗಿಯೇ ಚಿತ್ರೀಕರಣಕ್ಕೆ ಹೋದೆ.  ಹೀರೋಯಿನ್‌ ಆಗಿದ್ದುಕೊಂಡು ಐಟಮ್‌ ಸಾಂಗ್‌ ಮಾಡಿದರು ಎಂದು ಕೆಟಗರೈಸ್‌ ಆಗೋಕೆ ಇಷ್ಟ ಇರಲಿಲ್ಲ.  ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ ರಾಜು ಸುಂದರಂ ಅವರ ಕೊರಿಯೋಗ್ರಫಿಯಲ್ಲಿ ಕೆಲಸ ಮಾಡುವ ಅವಕಾಶ ಬಿಡೋದು ಹೇಗೆ..? ಇದು ನನ್ನ ಕೆರಿಯರ್ಗೆ ಹೊಡೆತ ಕೊಡುವ ಹಾಡಂತೂ ಅಲ್ಲ. ಬದಲಿಗೆ ಚುಟು ಚುಟು ಹುಡುಗಿ ಅಂತಿದ್ದ ನನ್ನನ್ನು ಈಗ ಪಟಾಕಿ ಪೋರಿ ಎನ್ನುತ್ತಿದ್ದಾರೆ ಎಂದಿದ್ದಾರೆ ಆಶಿಕಾ ರಂಗನಾಥ್.