` ಕನ್ನಡಕ್ಕೂ ಬಂದಳು ರಾಬರ್ಟ್ ಮಂಗ್ಲಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಕನ್ನಡಕ್ಕೂ ಬಂದಳು ರಾಬರ್ಟ್ ಮಂಗ್ಲಿ
Singer Mangali

ಕಣ್ಣೂ ಹೊಡಿಯಾಕ.. ಹಾಡನ್ನು ತೆಲುಗಿನಲ್ಲಿ ಅಷ್ಟೇ ದೊಡ್ಡ ಮಟ್ಟಕ್ಕೆ ಹಿಟ್ ಮಾಡಿದ್ದು ಬುಲೆಟ್ ಮಂಗ್ಲೀ ಎಂದೇ ಫೇಮಸ್ ಆಗಿರುವ ತೆಲುಗು ಜಾನಪದ ಸಿಂಗರ್ ಸತ್ಯವತಿ ಮಂಗ್ಲಿ. ಕಣ್ಣೇ ಅದಿರಿಂದಿ ಹಾಡು ಮತ್ತು ಮಂಗ್ಲಿಯ ಜೋಷ್ ಮತ್ತು ವಾಯ್ಸ್.. ಎಲ್ಲವೂ ತೆಲುಗರನ್ನು ಮೋಡಿ ಮಾಡಿದ್ದವು. ಆಕೆಯೀಗ ಕನ್ನಡಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

ಕರಿಯಾ ಐ ಲವ್ ಯೂ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ ಮಂಗ್ಲಿ. ಈ ಚಿತ್ರಕ್ಕೆ ನಿರ್ದೇಶಕ ತಿಪ್ಪೇಶ್ ಎಂಬ ಹೊಸ ಪ್ರತಿಭೆ. ಇದು ಜಾನಪದ ಹಾಡಂತೆ. ಮಂಗ್ಲಿಗೆ ಜೊತೆಯಾಗಿರುವುದು ಕನ್ನಡದ ಜನಪದ ಹುಡುಗ ನವೀನ್ ಸಜ್ಜು.

ನಮ್ಮ ಸಿನಿಮಾದಲ್ಲಿ ಹಳ್ಳಿಯೊಳಗೆ ಸ್ಪೆಷಲ್‌ ಹಾಡೊಂದು ಬರುತ್ತದೆ. ಅದನ್ನು ಮಂಗ್ಳಿಯವರು ಹಾಡಿದ್ದಾರೆ. ಅದೇ ಹಾಡಿನಲ್ಲಿ ಪುರುಷ ಧ್ವನಿಯಾಗಿ ನವೀನ್‌ ಸಜ್ಜು ಹಾಡಿದ್ದಾರೆ. ಇದೊಂದು ಪಕ್ಕಾ  ಹಳ್ಳಿ ಲವ್‌ ಸ್ಟೋರಿ. ಕಲಾವಿದರೆಲ್ಲರೂ ಹೊಸಬರೇ. ಮಂಜು ಬಳ್ಳಾರಿ ಎಂಬವರು ಹೀರೋ, ಶಕುಂತಲಾ ಎಂಬವರು ನಾಯಕಿ ಎಂದು ಮಾಹಿತಿ ನೀಡಿದ್ದಾರೆ ತಿಪ್ಪೇಶ್‌.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery