ರಾಜ್ಯ ಸರ್ಕಾರ ದಿಢೀರನೆ ಯಾವುದೇ ಮುನ್ಸೂಚನೆ ಇಲ್ಲದೆ ಥಿಯೇಟರುಗಳಿಗೆ ಶೇ.50ರ ನಿರ್ಬಂಧ ಹೇರಿದೆ. ಇದು ಚಿತ್ರರಂಗವನ್ನು ಕಂಗೆಡಿಸಿದೆ. ಈಗಷ್ಟೇ ಉಸಿರಾಡುವುದಕ್ಕೆ ಶುರು ಮಾಡಿದ್ದ ಚಿತ್ರರಂಗಕ್ಕೆ ಇದು ದೊಡ್ಡ ಹೊಡೆತ.
ಜನ ಯಾವುದೇ ನಿರ್ಬಂಧ ಇಲ್ಲದೆ ಓಡಾಡುತ್ತಿದ್ದಾರೆ. ಬಸ್ಸು, ರೈಲು, ವಿಮಾನ, ಮಾರ್ಕೆಟ್..ಎಲ್ಲಿಯೂ ನಿರ್ಬಂಧ ಇಲ್ಲ. ಕೊರೊನಾ ನಿಯಮಗಳನ್ನು ಯಾರೂ ಫಾಲೋ ಮಾಡುತ್ತಿಲ್ಲ. ಆದರೆ ರೂಲ್ಸ್‍ನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಥಿಯೇಟರುಗಳ ಮೇಲೆ ಸರ್ಕಾರ ಮುಗಿಬಿದ್ದಿದೆ. ಸರ್ಕಾರದ ತರ್ಕವೇ ಅರ್ಥವಾಗುತ್ತಿಲ್ಲ. ಇದುವರೆಗೆ ಯಾವುದೇ ಥಿಯೇಟರಿನಿಂದ ಕೊರೊನಾ ಬಂದಿಲ್ಲ. ಕಳೆದ ಒಂದು ವರ್ಷದಿಂದ ಹೈರಾಣಾಗಿದ್ದೇವೆ. ಸರ್ಕಾರ ನಾವು ಎಷ್ಟೇ ಮನವಿ ಮಾಡಿದರೂ ಸಣ್ಣ ಸಹಾಯವನ್ನೂ ಮಾಡಿಲ್ಲ. ಸಹಕಾರವನ್ನೂ ಕೊಟ್ಟಿಲ್ಲ. ಈಗಷ್ಟೇ ತಲೆ ಎತ್ತುತ್ತಿದ್ದೇವೆ ಎನ್ನುವಾಗ ಈ ತೀರ್ಮಾನ ಸರಿಯಲ್ಲ. ನಮಗೆ 50% ಅವಕಾಶ ಕೊಟ್ಟರೂ ಥಿಯೇಟರ್ ನಡೆಸುವ ಖರ್ಚು ಒಂದು ಪೈಸೆಯೂ ಕಡಿಮೆಯಾಗುವುದಿಲ್ಲ. ಇದಕ್ಕಿಂತ ಥಿಯೇಟರ್‍ಗಳನ್ನು ಮುಚ್ಚುವುದೇ ವಾಸಿ ಎಂದಿದ್ದಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್.
ಒಂದೆರಡು ದಿನ ಕಾದು ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡುತ್ತೇವೆ ಎಂದಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್.