ಲಾಕ್ ಡೌನ್ ಮಾಡಲ್ಲ, ಸೆಮಿ ಲಾಕ್ ಡೌನ್ ಕೂಡಾ ಮಾಡಲ್ಲ. ಹೊಸ ನಿರ್ಬಂಧ ಹೇರೋದಿಲ್ಲ ಎನ್ನುತ್ತಿದ್ದ ರಾಜ್ಯ ಸರ್ಕಾರ ಚಿತ್ರರಂಗದ ಮೇಲೆ ಬರೆಯನ್ನೇ ಎಳೆದಿದೆ. ಏಪ್ರಿಲ್ 20ರವರೆಗೆ ಥಿಯೇಟರುಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ.
ಏಪ್ರಿಲ್ 1ರಂದು ರಿಲೀಸ್ ಆಗಿದ್ದ ಯುವರತ್ನ ಚಿತ್ರಕ್ಕೆ ಇದು ದೊಡ್ಡ ಹೊಡೆತ. ರಿಲೀಸ್ ಆದ ಮರುದಿನವೇ ಬಂದಿರೋ ಹೊಸ ರೂಲ್ಸ್ ಪ್ರಕಾರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡಿದೆ ರಾಜ್ಯ ಸರ್ಕಾರ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ರೂಲ್ಸ್ ಮಾಡಿರುವ ಸರ್ಕಾರ, ಚಿತ್ರರಂಗಕ್ಕೆ ಬರೆಯನ್ನೇ ಎಳೆದುಬಿಟ್ಟಿದೆ.