` ಚಂದನ್..ಕವಿತಾ.. ಬಾಳಲ್ಲಿ ಲಕ್ಷ್ಮೀ ಬಂದಳಮ್ಮ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಚಂದನ್..ಕವಿತಾ.. ಬಾಳಲ್ಲಿ ಲಕ್ಷ್ಮೀ ಬಂದಳಮ್ಮ
Chandan Gowda, Kavitha Gowda

ಲಕ್ಷ್ಮೀ ಬಾರಮ್ಮ ಖ್ಯಾತಿಯ ಜೋಡಿ ಚಂದನ್ ಮತ್ತು ಕವಿತಾ ವೈವಾಹಿಕ ಜೀವನದ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇಬ್ಬರೂ ಏಪ್ರಿಲ್ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖಂಡಿತಾ ಇದು ಏಪ್ರಿಲ್ ಫೂಲ್ ಅಲ್ಲ. ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಇಬ್ಬರೂ 6 ತಿಂಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರಂತೆ. ಇನ್ನು ಕೆಲವೇ ದಿನಗಳಲ್ಲಿ ದಂಪತಿಗಳಾಗಲಿದ್ದಾರೆ.

ಅಂದಹಾಗೆ ಇಬ್ಬರದ್ದೂ 8 ವರ್ಷಗಳ ಗೆಳೆತನವಾದರೂ, ಪ್ರೀತಿಗಿನ್ನೂ 6 ತಿಂಗಳೂ ಆಗಿಲ್ಲವಂತೆ. ಮೇ ತಿಂಗಳಲ್ಲಿ ಮದುವೆಯಾಗುವ ಸಾಧ್ಯತೆ ಇದ್ದು, ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery