` ಧೂಮ್ರಪಾನ ಆರೋಗ್ಯಕ್ಕೆ ಹಾನಿಕರ ಬಾಲಕಿ.. ಬರ್ಕ್‍ಲೀ ನಾಯಕಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಧೂಮ್ರಪಾನ ಆರೋಗ್ಯಕ್ಕೆ ಹಾನಿಕರ ಬಾಲಕಿ.. ಬರ್ಕ್‍ಲೀ ನಾಯಕಿ..!
Simran

ಈಗಲೂ ಥಿಯೇಟರಿಗೆ ಎಂಟ್ರಿ ಕೊಟ್ಟರೆ ದರ್ಶನ ಕೊಡುವ ಮೊದಲ ಸೀನ್ ಇದೇ. ಈ ನಗರಕ್ಕೆ ಏನಾಗಿದೆ.. ಧೂಮ್ರಪಾನ ಆರೋಗ್ಯಕ್ಕೆ ಹಾನಿಕರ.. ಜಾಹೀರಾತು. ಸಿಗರೇಟು ಸೇದಿ ಬರುವ ಅಪ್ಪನನ್ನು ಆತಂಕದಿಂದ ನೋಡುವ ಮಗಳು.. ಮಗಳ ಆತಂಕಕ್ಕೇ ಕರಗಿ ಸಿಗರೇಟು ಬಿಡುವ ಅಪ್ಪನನ್ನು ಅಪ್ಪಿಕೊಳ್ಳುವ ಮಗಳು.. ಆ ಸೀನ್‍ನಲ್ಲಿ ಮುಗ್ಧತೆಯ ಸಾಕಾರವೇ ಆಗಿದ್ದ ಹುಡುಗಿ, ಈಗ ಹೀರೋಯಿನ್ ಆಗುವಷ್ಟು ಬೆಳೆದಿದ್ದಾರೆ.

ಕನ್ನಡದ ಬರ್ಕ್‍ಲೀ ಚಿತ್ರಕ್ಕೆ ಆಕೆಯೇ ನಾಯಕಿ. ಹೆಸರು ಸಿಮ್ರನ್ ನಾಟೇಕರ್. ಸಂತೋಷ್ ಎಂಟರ್‍ಪ್ರೈಸರ್ ಮೂಲಕ ಆನೇಕಲ್ ಬಾಲರಾಜ್ ನಿರ್ಮಿಸುತ್ತಿರೋ ಚಿತ್ರದಲ್ಲಿ ಸಿಮ್ರಾನ್ ನಾಯಕಿಯಾಗುತ್ತಿದ್ದಾರೆ. ಹೀರೋ ಆಗಿರುವುದು ಗಣಪ, ಕರಿಯ 2 ಚಿತ್ರದಲ್ಲಿ ನಟಿಸಿದ್ದ ಸಂತೋಷ್.  ಚರಣ್‍ರಾಜ್, ಶೃತಿ ಕೂಡಾ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಸುಮಂತ್ ಕ್ರಾಂತಿ ಡೈರೆಕ್ಟರ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery