` ಯುವರತ್ನನಿಗೆ ಅದ್ಭುತ ಕಾಣಿಕೆ : ಅಪ್ಪು ಅಭಿಮಾನಿಗಳು ರಿಯಲೀ ಗ್ರೇಟ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಯುವರತ್ನನಿಗೆ ಅದ್ಭುತ ಕಾಣಿಕೆ : ಅಪ್ಪು ಅಭಿಮಾನಿಗಳು ರಿಯಲೀ ಗ್ರೇಟ್..!
Puneeth Rajkumar

ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಇಡೋ ಹೆಜ್ಜೆಯೇ ಬೇರೆ. ಇದು ಅಂಥದ್ದೇ ಕಥೆ. ಇದು ನಡೆದಿರೋದು ಬಳ್ಳಾರಿಯಲ್ಲಿ. ಅಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿರುವ ಮಾರೆಪ್ಪ ಎಂಬ ವ್ಯಕ್ತಿಯ ಕಥೆ ಇದು. ಆತನ ಪಾಲಿಗೆ ಅಪ್ಪು ಫ್ಯಾನ್ಸ್ ಬೆಳಕಾಗಿ ಬಂದಿದ್ದಾರೆ.

ಆಗಿದ್ದು ಇಷ್ಟೆ, ಮಾರಪ್ಪ ಸಿನಿಮಾ ಬಿಡುಗಡೆ ವೇಳೆ ಹಾಕಿರೋ ಬ್ಯಾನರುಗಳಿರ್ತವಲ್ಲ, ಅವುಗಳನ್ನ ತೆಗೆದುಕೊಂಡು ಹೋಗುತ್ತಿದ್ದರಂತೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಬೆನ್ನು ಹತ್ತಿದಾಗ ಗೊತ್ತಾಗಿದ್ದು, ಆತನ ಗುಡಿಸಲು ಮನೆ. ಸೋರುವ ಸೂರು. ಅದನ್ನು ಈ ಬ್ಯಾನರುಗಳಿಂದ ಮುಚ್ಚಿಕೊಳ್ಳೋ ಸರ್ಕಸ್ ಮಾಡುತ್ತಿದ್ದರು ಮಾರಪ್ಪ. ಇದು ಗೊತ್ತಾದದ್ದೇ ತಡ, ಮುತ್ತುರಾಜ್ ಗೆಳೆಯರ ಬಳಗ ಏನಾದರೂ ಮಾಡಬೇಕಲ್ಲ ಎಂದು ಹೊರಟಿತು.

ಒಂದು ವಿಷಯವನ್ನಿಲ್ಲಿ ಹೇಳಲೇಬೇಕು. ಈ ಮುತ್ತುರಾಜ್ ಗೆಳೆಯರ ಬಳಗದಲ್ಲಿರೋ ಯಾರೊಬ್ಬರೂ ಕೋಟ್ಯಧಿಪತಿಗಳಲ್ಲ. ಇವರೂ ಬಡವರು ಅಥವಾ ಮಧ್ಯಮ ವರ್ಗದವರು. ಆದರೂ..  ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.. ಮನಸೊಂದಿದ್ದರೆ ಮಾರ್ಗವು ಉಂಟು.. ಎಂದು ಹೊರಟೇಬಿಟ್ಟರು. ಬಳಗದಲ್ಲಿದ್ದ ಎಲ್ಲ 24 ಸದಸ್ಯರೂ ಅಷ್ಟೋ.. ಇಷ್ಟೋ.. ಹಣ ಹೊಂದಿಸಿದರು. ನೋಡ ನೋಡುತ್ತಲೇ ಪುಟ್ಟ ಗಂಟಾಯ್ತು. ಮನೆಯೂ ಸಿದ್ಧವಾಯ್ತು.

ಯುವರತ್ನ ಬಿಡುಗಡೆ ಹೊತ್ತಿಗೆ ಆ ಅಭಿಮಾನದ ಅರಮೆನಯ ಗೃಹ ಪ್ರವೇಶ ಮಾಡಿದ್ದಾರೆ ಮಾರಪ್ಪ-ಲಕ್ಷ್ಮೀ ದಂಪತಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery