` ಏ. 4ರಂದು ಚಿತ್ರಲೋಕ ಸಹಯೋಗದಲ್ಲಿ ರಂಗೋಲಿ ಸ್ಪರ್ಧೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಏ. 4ರಂದು ಚಿತ್ರಲೋಕ ಸಹಯೋಗದಲ್ಲಿ ರಂಗೋಲಿ ಸ್ಪರ್ಧೆ
Dr CA Kishore

ಬೆಂಗಳೂರಿನ ಬಸವನ ಗುಡಿಯ ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿ ಏಪ್ರಿಲ್ 4ರಂದು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಏಪ್ರಿಲ್ 4ರಂದು ಬೆಳಗ್ಗೆ 6 ಗಂಟೆಯಿಂದ ಸ್ಪರ್ಧೆ ಆರಂಭವಾಗಲಿದೆ. ಸ್ವಸ್ಥ ಸಮೃದ್ಧ ಭಾರತ ಮತ್ತು ಭಾರತೀಯ ಆಯುರ್ವೇದ ಪ್ರತಿಷ್ಠಾನ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಚಿತ್ರಲೋಕ ಡಾಟ್ ಕಾಮ್ ಸಹಯೋಗವಿದೆ. ಚಿತ್ರಲೋಕ, ವಿಜಯವಾಣಿ, ದಿಗ್ವಿಜಯ ನ್ಯೂಸ್, ಲಯನ್ ಕ್ಲಬ್ ಬೆಂಗಳೂರು ಪ್ರೈಡ್, ಗರುಡ ಫೌಂಡೇಷನ್, ಕೆಮಿಸ್ಟ್ ಬ್ರಿಗೇಡ್, ತ್ರಿಶೂಲ ಟ್ರಸ್ಟ್, ಕುಮಾರಸ್ವಾಮಿ ನಗರ ಕೇಂದ್ರ ಗ್ರಂಥಾಲಯಗಳ ಸಹಯೋಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಿದು.

ಏಪ್ರಿಲ್ 4ರಂದು ಶಾಸಕ ಡಾ.ಉದಯ ಗರುಡಾಚಾರ್, ಸ್ಪರ್ಧೆಯನ್ನು ಉದ್ಘಾಟಿಸುತ್ತಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ತಾರಾ ಅನುರಾಧಾ, ನಟಿ ವನಿತಾ ವಾಸು, ವಿಆರ್‍ಎಲ್ ಮೀಡಿಯಾ ಉಪಾಧ್ಯಕ್ಷ ಅರುಣ್ ಕರಡಿ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ಮಹಿಳೆಯರು, ಪುರುಷರು ಮತ್ತು ಅಂಗವಿಕಲರು, ಈ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ತೃತೀಯ ಬಹುಮಾನ ವಿಜೇತರಿಗೆ 2 ಸಾವಿರ ರೂ. ಬಹುಮಾನ ನೀಡಲಾಗುವುದು.

ಒಬ್ಬ ಸ್ಪರ್ಧಿಗೆ ಒಬ್ಬ ಸಹಾಯಕರನ್ನು ಕರೆದು ತರುವ ಅವಕಾಶವಿದೆ. ಸ್ಪರ್ಧೆ ಶುರುವಾಗುವ 15 ನಿಮಿಷ ಮೊದಲು ಸ್ಥಳದಲ್ಲಿರಬೇಕು. ರಂಗೋಲಿ ಮುಗಿಸಲು ಒಂದು ಗಂಟೆ ಗರಿಷ್ಠ ಅವಧಿ. ಚುಕ್ಕಿ ರಂಗೋಲಿಗೆ ಮಾತ್ರ ಅವಕಾಶ. ಬಣ್ಣ ತುಂಬಬಹುದು. ಅಡಿಬರಹಗಳು ಕನ್ನಡದಲ್ಲಿಯೇ ಇರಬೇಕು. ತೀರ್ಪುಗಾರರ ನಿರ್ಣಯವೇ ಅಂತಿಮ. ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

 

ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ

ಕವನ್ ಕುಮಾರ್ : 99160 09422

ಡಾ.ಸಿ.ಎ.ಕಿಶೋರ್ : 80500 10100

ಕರೆ ಮಾಡಬಹುದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery