` ರಾಬರ್ಟ್ 100 ಕೋಟಿ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
ರಾಬರ್ಟ್ 100 ಕೋಟಿ
Roberrt Movie Image

ಯುವರತ್ನ ರಿಲೀಸ್ ಆಗಿರುವ ಹೊತ್ತಿನಲ್ಲೇ ಸ್ಯಾಂಡಲ್‍ವುಡ್‍ಗೆ ಇನ್ನೊಂದು ಗುಡ್ ನ್ಯೂಸ್. 3 ವಾರದ ಹಿಂದೆ ರಿಲೀಸ್ ಆಗಿದ್ದ ರಾಬರ್ಟ್, ಬಾಕ್ಸಾಫೀಸ್‍ನಲ್ಲಿ 100 ಕೋಟಿ ಗಳಿಕೆ ಮಾಡಿದೆ. 20 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ ರಾಬರ್ಟ್.

ಈ ಹಿಂದೆ ಕೆಜಿಎಫ್, ಕುರುಕ್ಷೇತ್ರ ಚಿತ್ರಗಳ ಕಲೆಕ್ಷನ್ 100 ಕೋಟಿ ದಾಟಿತ್ತಾದರೂ, ಎಲ್ಲ ಭಾಷೆಗಳ ಒಟ್ಟು ಕಲೆಕ್ಷನ್ ಎನ್ನಲಾಗಿತ್ತು. ಆದರೀಗ ರಾಬರ್ಟ್, ಕನ್ನಡವೊಂದರಲ್ಲೇ 100 ಕೋಟಿ ದಾಟಿದೆಯಂತೆ. ಚಿತ್ರತಂಡ ಇದನ್ನು ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲವಾದರೂ, ಪೋಸ್ಟರುಗಳಂತೂ ಓಡಾಡುತ್ತಿವೆ.

ಬಿಕೆಟಿಯಲ್ಲಿ 30 ಕೋಟಿ, ಮೈಸೂರು ಭಾಗದಿಂದ 24 ಕೋಟಿ, ದಾವಣಗೆರೆ, ಚಿತ್ರದುರ್ಗದಿಂದ 15 ಕೋಟಿ, ಶಿವಮೊಗ್ಗದಿಂದ 9 ಕೋಟಿ, ಹೈದರಾಬಾದ್ ಕರ್ನಾಟಕದಿಂದ 13 ಕೋಟಿ, ಮುಂಬೈ ಕರ್ನಾಟಕದಿಂದ 9 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

ಹೌದಾ.. ಉಮಾಪತಿಯವರೇ ಉತ್ತರ ಹೇಳಬೇಕು. ಆದರೀಗ ಉಮಾಪತಿ ಫುಲ್ ಜೋಶ್‍ನಲ್ಲಿದ್ದಾರೆ. ಬಾಕ್ಸಾಫೀಸ್ ವಿಚಾರದಲ್ಲಿ ಮಾತ್ರ, ಸದ್ಯಕ್ಕೆ ಸೈಲೆಂಟು.