ಯುವರತ್ನ ಚಿತ್ರದ ಮೂಲಕ ಮತ್ತೊಂದು ಸೆನ್ಸೇಷನ್ ಸೃಷ್ಟಿಸೋಕೆ ಬರುತ್ತಿರೋ ಪುನೀತ್ ರಾಜ್‍ಕುಮಾರ್, ಫಿಟ್ & ಫೈನ್ ಅನ್ನೋದನ್ನ ಹೇಳೋ ಅಗತ್ಯವೇ ಇಲ್ಲ. ಎಷ್ಟೋ ಜನರಿಗೆ ಫಿಟ್ ಆಗೋಕೆ ಅಪ್ಪು ಸ್ಫೂರ್ತಿ. ಅವರ ಕೆಲವು ವಿಡಿಯೋಗಳು ಮೈ ಝುಮ್ಮೆನಿಸುವುದೂ ಸತ್ಯ. ಹಾಗೆ ವ್ಹಾವ್ ಎಂದವರಲ್ಲಿ ಭಾರತ ಟೀಂ ಕ್ಯಾಪ್ಟನ್ ಆಗಿದ್ದ, ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ಕೂಲ್ ಧೋನಿ ಕೂಡಾ ಇದ್ದಾರೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲದೇ ಇದ್ದ ಸತ್ಯ.
ಲಾಕ್ ಡೌನ್ ವೇಳೆ ಪುನೀತ್ ತಾವು ವ್ಯಾಯಾಮ ಮಾಡುವ ವಿಡಿಯೋಗಳನ್ನು ಬಿಟ್ಟು ಫಿಟ್‍ನೆಸ್ ಸಂದೇಶ ಕೊಡುತ್ತಿದ್ದರು. ಆ ವಿಡಿಯೋ ನೋಡಿ ವ್ಹಾವ್ ಎಂದಿದ್ದರಂತೆ ಧೋನಿ. ಧೋನಿ ಮತ್ತು ಪುನೀತ್ ಇಬ್ಬರಿಗೂ ಒಬ್ಬರು ಕಾಮನ್ ಫ್ರೆಂಡ್ ಇದ್ದಾರೆ. ಅವರು ಧೋನಿಗೆ ಪುನೀತ್ ಅವರ ನಂಬರ್ ಕೊಟ್ಟು ಮಾತನಾಡಿಸಿದ್ದಾರೆ. ಇದೆಲ್ಲವನ್ನೂ ಯುವರತ್ನ ನಿರ್ದೇಶಕ ಸಂತೋಷ್ ಆನಂದರಾಮ್ ಖುಷಿ ಖುಷಿಯಾಗಿ ಹೇಳಿಕೊಂಡಿದ್ದಾರೆ.