` ನೇತ್ರದಾನ ಮಾಡಿದ ಡಾ.ಶಿವ ರಾಜ್'ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನೇತ್ರದಾನ ಮಾಡಿದ ಡಾ.ಶಿವ ರಾಜ್'ಕುಮಾರ್
ನೇತ್ರದಾನ ಮಾಡಿದ ಡಾ.ಶಿವ ರಾಜ್'ಕುಮಾರ್

ಕರ್ನಾಟಕದಲ್ಲಿ ನೇತ್ರದಾನದ ಬಗ್ಗೆ ದೊಡ್ಡ ಜಾಗೃತಿ ಮೂಡಿಸಿದವರು ವರನಟ ಡಾ.ರಾಜ್ ಕುಮಾರ್. ಸ್ವತಃ ನೇತ್ರದಾನ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದರು ರಾಜ್. ಈಗ ಅದೇ ಹಾದಿಯಲ್ಲಿ ಅವರ ಮಗ ಶಿವರಾಜ್ ಕುಮಾರ್ ಕೂಡಾ ಹೆಜ್ಜೆಯಿಟ್ಟಿದ್ದಾರೆ.

ಇತ್ತೀಚೆಗೆ ಕನ್ನಡದ ಅಕ್ಷಿ ಸಿನಿಮಾ ರಾಷ್ಟ್ರ ಪ್ರಶಸ್ತಿ ಪುರಸ್ಕಾರ ತೆಗೆದುಕೊಂಡಿದೆಯಷ್ಟೇ. ಆ ಚಿತ್ರತಂಡವನ್ನು ನಾರಾಯಣ ನೇತ್ರಾಲಯ ಮತ್ತು ಡಾ.ರಾಜ್ ಕುಮಾರ್ ಕಣ್ಣಿನ ಬ್ಯಾಂಕ್ ಆತ್ಮೀಯವಾಗಿ ಸನ್ಮಾನಿಸಿತು. ಇದೇ ವೇಳೆ ನೇತ್ರದಾನದ ಪ್ರತಿಜ್ಞೆ ಸ್ವೀಕರಿಸಿದರು ಶಿವಣ್ಣ.

ನೇತ್ರದಾನದ ಪ್ರತಿಜ್ಞೆ ಈ ಹಿಂದೆಯೇ ತೆಗೆದುಕೊಂಡಿದ್ದೆ. ಈಗ ಕಾರ್ಡ್ ತೆಗೆದುಕೊಂಡಿದ್ದೇನೆ, ಅಷ್ಟೆ ಎಂದ ಶಿವಣ್ಣ ನೇತ್ರದಾನಕ್ಕೆ ಕರೆ ನೀಡಿದರು. ಅಂದಹಾಗೆ ಡಾ.ರಾಜ್ ಕುಮಾರ್ ನೇತ್ರಬ್ಯಾಂಕ್‍ನ್ನು ಉದ್ಘಾಟಿಸಿದ್ದವರು ಸ್ವತಃ ಡಾ.ರಾಜ್‍ಕುಮಾರ್. ಅವರು ಮೃತಪಟ್ಟಾಗ ನಾರಾಯಣ ನೇತ್ರಾಲಯಕ್ಕೆ ಡಾ.ರಾಜ್ ನೇತ್ರಗಳನ್ನು ನೀಡಲಾಗಿತ್ತು. ಪಾರ್ವತಮ್ಮ ರಾಜ್‍ಕುಮಾರ್ ಕೂಡಾ ನೇತ್ರದಾನ ಮಾಡಿದ್ದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery