ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಲವ್ವಲ್ಲಿ ಬಿದ್ದಿದ್ದಾರೆ. ಅವಳ ನೆನಪಲ್ಲೇ ಮ್ಯೂಸಿಕ್ಕು ಕೇಳುತ್ತಿದ್ದಾರೆ. ಅವಳಿಗಾಗಿ ಅಡುಗೆ ಮನೆಗೂ ಹೆಜ್ಜೆಯಿಟ್ಟಿದ್ದಾರೆ. ಅವಳು ಮಾತನಾಡುತ್ತಿದ್ದರೆ.. ಜಗತ್ತನ್ನೇ ಮರೆತು ಅವಳ ಮುಖವನ್ನೇ ನೋಡುತ್ತಾ ಕೂರುತ್ತಿದ್ದಾರೆ. ಯಾರವಳು..?
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ರಿಹರ್ಸಲ್ ದೃಶ್ಯಗಳಿವು. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ಅವರನ್ನು ಈ ರಿಹರ್ಸಲ್‍ಗೆ ಕೂರಿಸಿರುವುದು ನಿರ್ದೇಶಕ ಹೇಮಂತ್ ರಾವ್. 777 ಚಾರ್ಲಿ ಶೂಟಿಂಗ್ ಮುಗಿಸಿರುವ ರಕ್ಷಿತ್ ಶೆಟ್ಟಿ, ಅಷ್ಟೇ ಫಾಸ್ಟಾಗಿ ಲವ್ ಮೂಡ್‍ಗೆ ಬಂದಿದ್ದಾರೆ. ಲವ್ ಮೂಡ್‍ಗೆ ಯಾವತ್ತಿದ್ರೂ ಫಾಸ್ಟಾಗೇ ಬರಬೇಕಲ್ವಾ..