` ಲಕ್ಷ್ಮೀ ಬಾರಮ್ಮ ಜೋಡಿ ಇನ್ಮುಂದೆ ಜನುಮದ ಜೋಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಲಕ್ಷ್ಮೀ ಬಾರಮ್ಮ ಜೋಡಿ ಇನ್ಮುಂದೆ ಜನುಮದ ಜೋಡಿ
Chandan Kumar, Kavitha Gowda

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಖ್ಯಾತ ಜೋಡಿ ಚಂದನ್ ಮತ್ತು ಕವಿತಾ ಗೌಡ ಅವರದ್ದು. ಇತ್ತ ಬೆಳ್ಳಿತೆರೆಯಲ್ಲೂ ಒಂದು ಝಲಕ್ ತೋರಿಸುತ್ತಿರುವ ಚಂದನ್, ಈಗ ತಮ್ಮ ಜನುಮದ ಜೋಡಿಯನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲೇ ಹುಡುಕಿಕೊಂಡಿದ್ದಾರೆ.

ನಾಳೆ ಅಂದ್ರೆ ಏಪ್ರಿಲ್ 1ರಂದು ಇಬ್ಬರದ್ದೂ ನಿಶ್ಚಿತಾರ್ಥ ನಡೆಯಲಿದೆಯಂತೆ. ಈ ಹಿಂದೆ ಈ ಬಗ್ಗೆ ಗಾಸಿಪ್‍ಗಳು ಕೇಳಿಬಂದಾಗ ಅದನ್ನು ವ್ಯಂಗ್ಯ ಮಾಡಿ ನಕ್ಕಿದ್ದರು ಚಂದನ್. ಹೀಗಾಗಿ ಏನೂ ಇಲ್ಲ ಬಿಡಿ ಎಂದಿದ್ದವರಿಗೆ ಏಪ್ರಿಲ್ 1ರಂದು ನಾವಿಬ್ಬರೂ ಮೂರ್ಖರಾಗುತ್ತಿದ್ದೇವೆ ಎಂದು ಸ್ಟೇಟಸ್ ಹಾಕಿ ಮೂರ್ಖರನ್ನಾಗಿಸಿದ್ದಾರೆ ಚಂದನ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery